ಮನೆ ಕ್ಲೀನ್​ ಮಾಡುವಾಗ ಮಹಿಳೆಗೆ ಸಿಕ್ಕ ನೋಟುಗಳ ಕಂತೆ | Video Viral

FotoJet
Published on

ನವದೆಹಲಿ: ಭಾರತದಲ್ಲಿ ಹಬ್ಬಗಳಿಗೆ ಮನೆ ಶುಚಿಗೊಳಿಸುವುದು ಸಾಮಾನ್ಯವಾಗಿದೆ. ಇದೇ ರೀತಿ ಮಹಿಳೆಯೊಬ್ಬರು ದೀಪಾವಳಿ ಹಬ್ಬಕ್ಕೆ ಮನೆ ಶುಚಿಗೊಳಿಸಲು ಮುಂದಾಗಿದ್ದಾರೆ. ಆ ವೇಳೆ ಮಹಿಳೆಗೆ 500 ರೂಪಾಯಿ ಮತ್ತು 1000 ರೂಪಾಯಿಗಳ ಫೋಟೋ ಪತ್ತೆಯಾಗಿದೆ. ನೋಟುಗಳನ್ನು ನೋಡಿ ಮಹಿಳೆ ಶಾಕ್​ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Video Viral) ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿ ಮನೆ ಕ್ಲೀನ್​​ ಮಾಡುವ ವೇಳೆ ಸಿಕ್ಕಿರುವ ನೋಟುಗಳನ್ನು ನೋಡಬಹುದು. ಅಲ್ಲದೆ ಅವು ನೋಟುಗಳು ಅಮಾನ್ಯೀಕರಣಗೊಂಡ ನೋಟುಗಳಾಗಿವೆ. 500 ರೂ. ಮತ್ತು 1000 ರೂಪಾಯಿಗಳ ನೋಟುಗಳನ್ನು ನೋಡಿ ಮಹಿಳೆಗೆ ಶಾಕ್​ ಆಗಿದೆ.

ಈ ವಿಡಿಯೋವನ್ನು ಇದುವರೆಗೂ 22 ಮಿಲಿಯನ್​ ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದಕ್ಕಾಗಿಯೇ ಹಣದ ಬಗ್ಗೆ ನನ್ನ ಹೆಂಡತಿಯನ್ನು ನಂಬುವುದಿಲ್ಲ!, ನಾನು ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಏನಾಗಬಹುದು ಎಂದು ನನಗೆ ಆಶ್ಚರ್ಯವಾಗುವಂತೆ ಮಾಡಿದೆ, ಈಗಲೇ ಆ ನೋಟುಗಳನ್ನು ಬದಲಾಯಿಸಲು ಸಾಧ್ಯವಾದರೆ! ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net