VIDEO: 300 ಕಿ.ಮೀ. ಸ್ಪೀಡ್ ಮುನಿಯಪ್ಪ ಈಗ ಬೈಕ್ ಸಹಿತ ಅಂದರ್!

Muniyappa and his bike
Published on

ಬೆಂಗಳೂರು: ಇಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್ ಮೇಲೆ 300 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸಿದ ನಂತರ ಸ್ಪೀಡೋ ಮೀಟರ್​ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿ ವೈರಲ್ ಮಾಡಿದ್ದವ, ಅಷ್ಟೇ ವೇಗದಲ್ಲಿ ಪೊಲೀಸ್​ ಬಲೆಗೆ ಬಿದ್ದಿದ್ದಾನೆ.

ಅತಿವೇಗದ ಚಾಲನೆ ಮಾಡಿದಾತನ ಹೆಸರು ಮುನಿಯಪ್ಪ. ವಯಸ್ಸು 29. ಲಾಕ್​ಡೌನ್ ಇದ್ದಾಗ ಬೈಕ್ ಚಲಾಯಿಸಿ ದುಸ್ಸಾಹಸ ತೋರಿದ್ದ. ಆತ ಓಡಿಸಿದ ಬೈಕ್ 1000 ಸಿಸಿ ಸಾಮರ್ಥ್ಯ ಯಮಹಾ. ಆ ಬೈಕ್ ಅನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಸಿಬಿ ಪೊಲೀಸರು ವೈರಲ್ ವಿಡಿಯೋ ನೋಡಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಮುನಿಯಪ್ಪನನ್ನು ಬಂಧಿಸಿ ಸಂಚಾರಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net