'ಮಸೀದಿಗಳಲ್ಲಿ ನಮಾಜ್ ಮಾಡೋಕೆ ಬಿಟ್ಟು ನೋಡಿ, ಕರೊನಾ ಮಂಗಮಾಯ'- ಸಂಸದ ಶಫಿಕರ್ ರೆಹಮಾನ್

Shafiquer
Published on

ಲಖನೌ: ಕರೊನಾ ಕೈಮೀರುತ್ತಿರುವ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫಿಕರ್​ ರೆಹಮಾನ್​ ಅವರು ನೀಡಿರುವ ಹೇಳಿಕೆಯೊಂದು ವೈರಲ್ ಆಗುತ್ತಿದೆ.

ಮುಸ್ಲಿಮರಿಗೆ ಮಸೀದಿಗಳಿಗೆ ತೆರಳಿ ನಮಾಜ್​ ಮಾಡಲು ಅವಕಾಶ ಮಾಡಿಕೊಟ್ಟರೆ ಮಾತ್ರ ಕರೊನಾ ನಿಯಂತ್ರಣವಾಗುತ್ತದೆ ಎಂದು ಶಫಿಕರ್​ ಹೇಳಿದ್ದಾರೆ. ಅಷ್ಟೇ ಅಲ್ಲ ಆಗಸ್ಟ್​ 12ರಂದು ನಡೆಯಲಿರುವ ಬಕ್ರೀದ್​ ಹಬ್ಬದ ನಿಮಿತ್ತ ಮಾರುಕಟ್ಟೆಗಳನ್ನೆಲ್ಲ ತೆರೆಯಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ. ಇದನ್ನೂ ಓದಿ: ವಾರ್ಡ್​ಬಾಯ್​ಗೆ ಕೊಡಲು 30 ರೂ. ಇಲ್ಲದ್ದಕ್ಕೆ ಸ್ಟ್ರೆಚರ್​ ದೂಡಿದ 6ರ ಬಾಲಕ

ಬಕ್ರೀದ್​ಗೂ ಮುಂಚಿತವಾಗಿ ಮಾರುಕಟ್ಟೆಗಳು ತೆರೆಯಬೇಕು. ಆಗ ನಮಗೂ ಕುರಿಗಳನ್ನು ಖರೀದಿಸಲು ಸುಲಭವಾಗುತ್ತದೆ. ಈದ್​ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ ನಮಾಜ್ ಮಾಡಬೇಕಾಗುತ್ತದೆ. ಹಾಗಾಗಿ ಕೂಡಲೇ ಮಸೀದಿಗಳನ್ನು ತೆರೆಯಲು ಅವಕಾಶ ನೀಡಬೇಕು. ನಾವೂ ಕೂಡ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಕರೊನಾ ವೈರಸ್​ನಿಂದ ದೇಶವನ್ನು ಮುಕ್ತಗೊಳಿಸುವಂತೆ ಬೇಡಿಕೊಳ್ಳುತ್ತೇವೆ. ನಮ್ಮ ಪ್ರಾರ್ಥನೆಯನ್ನು ಖಂಡಿತ ದೇವರು ಕೇಳುತ್ತಾನೆ. ಕರೊನಾ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿರುವುದರಿಂದ ರಾಜ್ಯದಲ್ಲಿ ಪ್ರತಿ ವಾರಾಂತ್ಯದಲ್ಲಿ ಲಾಕ್​ಡೌನ್​ ಹೇರಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net