

ಚೀನಾ: ಇಲ್ಲಿನ ಪ್ರಸಿದ್ಧ ತಾಣವಾದ ಗ್ರೇಟ್ ವಾಲ್ ಆಫ್ ಚೀನಾಗೆ ಕಳೆದ ಕೆಲವು ದಿನಗಳಿಂದ ಭಾರೀ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇಲ್ಲಿನ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದೇ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಸದ್ಯ ವೈರಲ್ ಆದ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಇದೇ ಪರಿಸ್ಥಿತಿಯನ್ನು ಬೇರೆ ರಾಜ್ಯದಲ್ಲಿಯೂ ನೋಡಿದ್ದೀವಿ ಎಂದು ಲೇವಡಿ ಮಾಡಿದ್ದಾರೆ.
ಸದ್ಯ ಗ್ರೇಟ್ ವಾಲ್ ಆಫ್ ಚೀನಾದಲ್ಲಿ ಭಾರೀ ಜನದಟ್ಟಣೆಯನ್ನು ನೋಡಿದ ನೆಟ್ಟಿಗರು ಈ ರೀತಿಯ ದೃಶ್ಯಗಳು ಮುಂಬೈನ ಲೋಕಲ್ ರೈಲಿನಲ್ಲಿ ಕಂಡುಬರುತ್ತದೆ. ಇದು ಯಾಕೋ ಅದೇ ಸೀನ್ ಅನ್ನು ನೆನಪಿಸುತ್ತದೆ. ಲೋಕಲ್ ಟ್ರೈನ್‌ಗಳಲ್ಲಿ ನೂಕುನುಗ್ಗಲು ಮಾಡಿಕೊಂಡು, ಪ್ರಯಾಣಿಸುವ ಜನರಂತೆಯೇ ಇಲ್ಲಿಯೂ ಕೂಡ ಪ್ರವಾಸಿಗರು ಪರದಾಡುತ್ತಿರುವುದನ್ನು ಕಾಣಬಹುದು ಎಂದಿದ್ದಾರೆ.
ಚೀನಾದ ಗ್ರೇಟ್ ವಾಲ್ ದೃಶ್ಯ ಮತ್ತು ಮುಂಬೈನ ಲೋಕಲ್ ರೈಲಿನ ದೃಶ್ಯ ಎರಡಕ್ಕೂ ಕಿಂಚಿತ್ತು ವ್ಯತ್ಯಾಸವಿಲ್ಲ. ಎರಡು ಒಂದೇ ಸೀನ್ ಅನ್ನೇ ಹೋಲುತ್ತದೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).