

ಶಿಲ್ಲಾಂಗ್: 'ವಿಸಲಿಂಗ್ ವಿಲೇಜ್' ಎಂಬ ಹೆಸರು ಗಳಿಸಿರುವ ಮೇಘಾಲಯದ ಕಾಂಗ್ಥಾಂಗ್ ಗ್ರಾಮದಲ್ಲಿ ಪ್ರತಿಯೊಬ್ಬರ ಹೆಸರನ್ನು ಒಂದು ವಿಶಿಷ್ಟ ಸಂಗೀತದ ಟ್ಯೂನಿನಿಂದಲೇ ಗುರುತಿಸಲಾಗುತ್ತದೆ. ಈ ಹಳ್ಳಿಯ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಸೂಚಕವಾಗಿ ವಿಶೇಷವಾದ ಟ್ಯೂನ್ ಒಂದನ್ನು ರಚಿಸಿದ್ದಾರೆ.
ಈ ಅಪೂರ್ವವಾದ ಉಡುಗೊರೆಯನ್ನು ಸಿಎಂ ಕಾನರಾಡ್ ಸಂಗ್ಮಾ ಅವರು ಟ್ವಿಟರ್ ಮೂಲಕ ಪ್ರಧಾನಿ ಮೋದಿಗೆ ತಲುಪಿಸಿದ್ದಾರೆ. ಈ ಬಗೆಗಿನ ವಿಡಿಯೋ ತುಣುಕಿನಲ್ಲಿ, ಕಾಂಗ್ಥಾಂಗ್ ಗ್ರಾಮವನ್ನು ಪ್ರಮುಖ ಪ್ರವಾಸೀ ತಾಣವಾಗಿ ಬೆಳೆಸುವಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ ಎಂದಿದ್ದಾರೆ. ಸಿಎಂ ಸಂಗ್ಮಾರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮೋದಿ, ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)