

ಪುಣೆ: ಕರ್ತವ್ಯ ನಿರತರಾಗಿದ್ದ ಸಂಚಾರಿ ಪೊಲೀಸ್ ಒಬ್ಬರು ಮಾಸ್ಕ್ ಧರಿಸದ ಕಾರು ಚಾಲಕನನ್ನು ತಡೆಯತ್ನಿಸಿದ ವೇಳೆ, ಆತ ಸಂಚಾರಿ ಪೊಲೀಸ್ನನ್ನೇ ಗುದ್ದಿ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಪಿಂಪ್ರಿ ಚಿಂಚ್ವಾಡದಿಂದ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿರುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಮಾಡುತ್ತಿದ್ದರು. ಇದೇ ವೇಳೆ, ಈ ಕಾರಿನಲ್ಲಿ ಬಂದವರು ಮಾಸ್ಕ್ ಧರಿಸದೇ ಇರುವುದನ್ನು ಗಮನಿಸಿ ನಿಲ್ಲಿಸುವುದಕ್ಕಾಗಿ ಕಾರಿನ ಎದುರು ಹೋಗಿದ್ದಾರೆ. ಕಾರುಚಾಲಕ ಸಂಚಾರಿ ಪೊಲೀಸ್ಗೆ ಗುದ್ದಿದ್ದು, ಅವರು ಕಾರಿನ ಬಾನೆಟ್ ಮೇಲೆ ಬಿದ್ದರೂ ಚಾಲಕ ನಿಲ್ಲಿಸದೇ ಹಾಗೆಯೇ ಅವರನ್ನು ಹೊತ್ತುಕೊಂಡು ಮುಂದಿನ ಸಿಗ್ನಲ್ ತನಕ ಕಾರು ಚಲಾಯಿಸಿದ್ದ! ಕೆಲವು ಬೈಕ್ ಸವಾರರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿರುವ ದೃಶ್ಯವೂ ವಿಡಿಯೋದಲ್ಲಿದೆ.
ಗಾಯಗೊಂಡ ಸಂಚಾರಿ ಪೊಲೀಸ್ ಹೆಸರು ಅಬಾಸಾಹೇಬ್ ಸಾವಂತ್. ಆರೋಪಿಯ ಹೆಸರು ಯುವರಾಜ್ ಹನುವತೆ (49). ಈ ಸಂಬಂಧ ಪಿಂಪ್ರಿ ಚಿಂಚ್ವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್)