ಬಾದಾಮಿ ಪಟ್ಟಣದಲ್ಲಿ ಭಾರಿ ಅಗ್ನಿದುರಂತ

fire accident in badami
Published on

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಸುಕಿನ ವೇಳೆ ಭಾರಿ ಅಗ್ನಿದುರಂತ ಸಂಭವಿಸಿದ್ದು, ಬೈಕ್ ಗ್ಯಾರೇಜ್​, ಫರ್ನಿಚರ್ ಅಂಗಡಿ, ಹೋಟೆಲ್​ಗಳು ಸುಟ್ಟುಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ನಾಶ ನಷ್ಟ ಸಂಭವಿಸಿದ್ದು, ಹಾನಿ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ.

ನಸುಕಿನ ಮೂರು ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ದುರಂತದಲ್ಲಿ ಅಲ್ಲಾಭಕ್ಷ ಹೆಬ್ಬಳ್ಳಿ ಎಂಬುವರ ಬೈಕ್ ಗ್ಯಾರೇಜ್, ಹೂವಪ್ಪ ಕಲಾಲ ಅವರಿಗೆ ಸೇರಿದ ಹೋಟೆಲ್, ಭೀಮಸಿ ಬಡಿಗೇರ ಎಂಬುವರಿಗೆ ಸೇರಿದ ಫರ್ನೀಚರ್ ಅಂಗಡಿ ಸುಟ್ಟುಹೋಗಿವೆ.

ಬಾದಾಮಿ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಕೆಲವು ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ಸೇವೆ ಸಿಬ್ಬಂದಿ ಶೀಘ್ರವೇ ಅದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net