VIDEO| ಹಾಡಹಗಲೇ ಯುವತಿ ಮೇಲೆ ಮಚ್ಚಿನಿಂದ ಅಟ್ಯಾಕ್​

Machete Attack
Published on

ಪುಣೆ: ಆಘಾತಕಾರಿ ಘಟನೆ ಒಂದರಲ್ಲಿ ಹಾಡಹಗಲೇ ವ್ಯಕ್ತಿಯೋರ್ವ ಯುವತಿಯ ಮೇಲೆ ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯ ಸದಾಶಿವಪೇಟೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಆರೋಪಿ ಶಾಂತನು ಲಕ್ಷ್ಮಣ್​ ಜಾಧವ್​ ಎಂದು ಗುರತಿಸಲಾಗಿದ್ದು, ಹಲ್ಲೆಗೊಳಗಾಗಿರುವ ಯುವತಿ ಪ್ರೀತಿ ರಾಮಚಂದ್ರ(20)ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆರೋಪಿಯ ವಿರುದ್ಧ ನೆಟ್ಟಿಗರು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೂರು ನೀಡಿದ್ದಕ್ಕೆ ಸಿಟ್ಟು

ಹಲ್ಲೆಯ ಕುರಿತು ಪ್ರತಿಕ್ರಿಯಿಸಿರುವ ಯುವತಿ ತಾಯಿ ಆರೋಪಿಯೂ ತುಂಬಾ ದಿನಗಳಿಂದ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಆತನಿಗೆ ಎಚ್ಚರಿಸಿದ್ದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ಅವನ ತಂದೆಯ ಗಮನಕ್ಕೆ ತರಲಾಗಿತ್ತು. ಇದರಿಂದ ಕುಪಿತಗೊಂಡು ನನ್ನ ಮಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿಯೊಬ್ಬರು ಯುವಕ ಮೊದಲಿಗೆ ಯುವತಿಯ ಸ್ಕೂಟರ್​ ತಡೆದು ಜಗಳವಾಡಿದ. ಬಳಿಕ ಆಕೆ ಆತನ ಜೊತೆ ಮಾತನಾಡಲು ನಿರಾಕರಿಸಿದಾಗ ಯುವಕ ಏಕಾಏಕಿ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆಗೆ ಮುಂದಾದ. ಈ ವೇಳೆ ಯುವತಿ ಆತನಿಂದ ತಯಪ್ಪಿಸಿಕೊಂಡಿದ್ದು, ಅಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ಧೇವೆ ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿ ಹಲವು ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದು, ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಆತನ ವಿರುದ್ಧ ಭಾರತ ದಂಡ ಸಂಹಿತೆ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪುಣೆ ನಗರ ಡಿಸಿಪಿ ಸಂದೀಪ್​ ಸಿಂಗ್​ ಗಿಲ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net