

ಮುಂಬೈ: ಈ ಬಾರಿ ಭಾರತದ ಆತಿಥ್ಯದಲ್ಲಿ ನಡಯುವ ಏಕದಿನ ವಿಶ್ವಕಪ್ ಕಠಿಣ ಪೈಪೋಟಿಯಿಮದ ಕೂಡಿರಲಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ ಕುರಿತು ಪ್ರತಿಕ್ರಿಯಿಸಿದ ರೋಹಿತ್ ಟಿ-20 ಮಾದರಿಯ ಸ್ಪೋಟಕ ಆಟವು ಈಗ ಎಲ್ಲಾ ಮಾದರಿಗಳ ಮೇಲೆ ಪ್ರಭಾವ ಬೀರಿದ್ದು, ಬ್ಯಾಟ್ಸ್ಮನ್ಗಳು ಆರಂಭದಿಂದಲ್ಲೇ ಆಕ್ರಮಣಕಾರಿ ಆಟವನ್ನು ಅಳವಡಿಸಿಕೊಳ್ಳಲಿದ್ಧಾರೆ.
ಕ್ರಿಕೆಟ್ ಆಡುವ ರೀತಿ ಹಿಂದೆಂದಿಗಿಂತಲೂ ಧನಾತ್ಮವಾಗಿದ್ದು, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿರಲಿದೆ. ಈ ನಿಟ್ಟಿನಲ್ಲಿ ಭಾರತ ತಂಡವು ಹೆಚ್ಚಿನ ರೀತಿಯಲ್ಲಿ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಮಂಗಳವಾರ ಬಿಡುಗಡೆಯಾಗಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಭಾರತ ತಂಡವು ತನ್ನ ಲೀಗ್ ಹಂತದ ಒಂಬತ್ತು ಪಂದ್ಯಗಳನ್ನು ವಿಭಿನ್ನ ಮೈದಾನಗಳಲ್ಲಿ ಆಡಲಿದೆ.
ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 15ರಂದು ಭಅರತವು ಪಾಕಿಸ್ತಾನ ತಂಡವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.