

ಹೈದರಾಬಾದ್: ನಿಯಂತ್ರಣ ತಪ್ಪಿ ಮೀನು ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಸಹಾಯಕ ಗಂಭೀರವಾಗಿ ಗಾಯಗೊಂಡಿದ್ದು, ಜನರು ಅದನ್ನು ಗಮನಿಸದೆ ರಸ್ತೆಯಲ್ಲಿ ಬಿದ್ದಿದ್ದ ಮೀನುಗಳಿಗಾಗಿ ಮುಗಿಬಿದ್ದಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ನಲ್ಲಿ ನಡೆದಿದೆ.
ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಖಮ್ಮಂನಿಂದ ವಾರಂಗಲ್ಗೆ ಪಿಕಪ್ ವಾಹನದಲ್ಲಿ ಮೀನನ್ನು ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಖಮ್ಮಂನಿಂದ ವಾರಂಗಲ್ಗೆ ಮೀನಿನ ಲೋಡ್ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ಸಹಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದು, ಗಾಡಿಯನ್ನು ಸ್ಥಳದಿಂದ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದ ನಂತರ ಪಿಕಪ್ ವಾಹನದಲ್ಲಿದ್ದ ಮೀನುಗಳ ರಸ್ತೆಯಲ್ಲಿ ಹಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಚಾಲಕ ಸತ್ತು ಬಿದ್ದಿದ್ದರೂ ಅದನ್ನು ನೋಡದೆ ಮೀನಿಗಾಗಿ ಮುಗಿಬಿದದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಮೊದಲು ಜನರ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.