VIDEO | ಫುಟ್​ಬಾಲ್​ನೊಂದಿಗೆ ದೀದಿ! ಅಸಲಿ ಖೇಲಾ ಹೋಬೆ!

didi
Published on

ಕೊಲ್ಕತ : ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಳಸಿದ್ದ 'ಖೇಲಾ ಹೋಬೆ' ಘೋಷವಾಕ್ಯವು, ಇದೀಗ ಅಲ್ಲಿನ ರಾಜ್ಯ ಸರ್ಕಾರದ ಜನಪ್ರಿಯ ಯುವಜನ ಯೋಜನೆಯಾಗಿ ಮಾರ್ಪಟ್ಟಿದೆ. ಈ ಯೋಜನೆಯಡಿ, ರಾಜ್ಯ ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆಯು ಒಂದು ಲಕ್ಷಕ್ಕೂ ಹೆಚ್ಚು ಫುಟ್‌ಬಾಲ್‌ಗಳನ್ನು ವಿವಿಧ ಕ್ರೀಡಾ ಕ್ಲಬ್‌ಗಳಿಗೆ ಹಸ್ತಾಂತರಿಸುತ್ತಿದೆ.

ಇಂದು ಕೊಲ್ಕತದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಖೇಲಾ ಹೋಬೆ ಯೋಜನೆಯನ್ನು ಸಿಎಂ ಮಮತಾ ಬ್ಯಾನರ್ಜಿ ಉದ್ಘಾಟಿಸಿದರು. ಬ್ಯಾನರ್ಜಿ ಅವರು ಫುಟ್​ಬಾಲ್​ಅನ್ನು ಎಸೆದಾಡುತ್ತಾ, ಕಷ್ಟಪಟ್ಟು ಹಿಡಿಯುವುದು ವಿಡಿಯೋ ತುಣುಕಿನಲ್ಲಿ ಸೆರೆಯಾಗಿದೆ. ಎಎನ್​ಐ ಸುದ್ದಿ ಸಂಸ್ಥೆ ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಅವರು ಸಭಿಕರೆಡೆಗೆ ಹಲವು ಫುಟ್​ಬಾಲ್​ಗಳನ್ನು ಎಸೆಯುವುದನ್ನು ಕೂಡ ನೋಡಬಹುದು.

ಖೇಲಾ ಹೋಬೆ ಕಾರ್ಯಕ್ರಮದಡಿ ನೋಂದಾಯಿತ ಕ್ಲಬ್‌ಗಳಿಗೆ ಜಾಯ್ (ಸ್ಟ್ರೈಕರ್) ಬ್ರಾಂಡ್‌ನ ಫುಟ್‌ಬಾಲ್ ನೀಡಲಾಗುವುದು. ಯುವಕರು ಮತ್ತು ವಿದ್ಯಾರ್ಥಿಗಳನ್ನು ಫುಟ್‌ಬಾಲ್ ಆಡಲು ಪ್ರೋತ್ಸಾಹಿಸಲು ಮತ್ತು ಆ ಮೂಲಕ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net