VIDEO| ಮಗುವಿಗೂ ಬೇಕು, ಮಂಗನಿಗೂ ಬೇಕು ಈ ಮೊಬೈಲು!

baby
Published on

ಬೆಂಗಳೂರು: ಇಂದು ಮನುಷ್ಯರ ಜೀವನದ ಬಹುಪ್ರಮುಖ ಭಾಗವಾಗಿರುವುದು ಮೊಬೈಲ್​ ಫೋನು. ಆ ಫೋನು ಎಷ್ಟೋ ಬಾರಿ ಮಕ್ಕಳ ಕೈ ಆಟಿಕೆಯಾಗುತ್ತದೆ. ಈ ರೀತಿ ಮೊಬೈಲ್​ನೊಂದಿಗೆ ಕುಳಿತಿರುವ ಪುಟ್ಟ ಮಗುವಿನ ಬಳಿಗೆ ಬಂದ ಕೋತಿಗೂ ಮೊಬೈಲ್​ ಬಗ್ಗೆಯೇ ಹೆಚ್ಚು ಆಸಕ್ತಿ ಮೂಡಿರುವ ತಮಾಷೆಯ ದೃಶ್ಯವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಚಾರ್​ಪಾಯಿ ಮೇಲೆ ಕುಳಿತು ಸ್ಮಾರ್ಟ್​ಫೋನ್​ ನೋಡುತ್ತಿರುವಂತೆ, ಮಂಗವೊಂದು ಅಲ್ಲಿಗೆ ಬರುತ್ತದೆ. ಮಗುವಿನ ಕೈಯಿಂದ ಮೊಬೈಲ್​ ಕಸಿದು ತಾನು ಗಾಢವಾಗಿ ಫೋನಿನತ್ತ ದೃಷ್ಟಿ ನೆಡುತ್ತದೆ. ಕೋತಿಯ ಈ ಕೃತ್ಯಕ್ಕೆ ಉತ್ತರವಾಗಿ ಆ ಹೆಣ್ಣುಮಗು ಮೊಬೈಲನ್ನು ವಾಪಸ್​ ಪಡೆಯುತ್ತಾಳೆ. ಆದರೆ ಮತ್ತೆ ಕೋತಿ ಮೊಬೈಲ್​ ಕಸಿದುಕೊಂಡು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net