More

    ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು

    ಆರೋಗ್ಯಕ್ಕೆ ಪೂರಕವಾದ ಯೋಗಮುದ್ರೆಗಳನ್ನು ನಮ್ಮ ಋಷಿಮುನಿಗಳು ಹೇಳಿಕೊಟ್ಟಿದ್ದಾರೆ. ಹೃದಯದ ಆರೋಗ್ಯಕ್ಕೆ ಪೂರಕವಾದ ಕೆಲವು ಮುದ್ರೆಗಳುಂಟು. ನಮ್ಮ ಕೈಗಳ ಒಂದೊಂದು ಬೆರಳೂ ಒಂದೊಂದು ಪಂಚಭೂತವನ್ನು ಪ್ರತಿನಿಧಿಸುತ್ತದೆ. ಈ ಬೆರಳುಗಳನ್ನು ಬಳಸಿ ಮುದ್ರೆ ಮಾಡಿದಾಗ ಹೃದಯದ ಸ್ನಾಯುಗಳು ಬಲಗೊಂಡು ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ರಕ್ತಸಂಚಾರ ಆಗುತ್ತದೆ.

    ಹೃದಯದ ಆರೋಗ್ಯಕ್ಕೆ ಬೇರೆ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದವರು, ಹಿರಿಯ ನಾಗರೀಕರು ಮನೆಯಲ್ಲೇ ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ಅಥವಾ ಕುರ್ಚಿಯ ಮೇಲೆ ಕುಳಿತು ಮಾಡಬಹುದಾದಂಥದ್ದು ಮುದ್ರಾ ಯೋಗ. ಹೃದಯದ ಆರೋಗ್ಯಕ್ಕೆ ಎಲ್ಲರೂ ಮತ್ತು ಹೃದಯ ಸಮಸ್ಯೆ ಇರುವವರು ವಿಶೇಷವಾಗಿ ಈ ಕೆಳಗಿನ ಮುದ್ರೆಗಳನ್ನು ಅಭ್ಯಾಸ ಮಾಡಬಹುದು ಎಂದು ಯೋಗತಜ್ಞ ಗೋಪಾಲಕೃಷ್ಣ ದೇಲಂಪಾಡೆ ಅವರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

    ಪ್ರಾಣಮುದ್ರೆ: ಪ್ರಾಣಶಕ್ತಿ ಹೆಚ್ಚಾಗಲು, ನಿತ್ರಾಣ ಕಡಿಮೆಯಾಗಲು, ಆಯಾಸ ಪರಿಹಾರವಾಗಲು, ವಿಟಮಿನ್​ ಕೊರತೆ ನೀಗಿಸಲು ಮತ್ತು ಇಡೀ ದೇಹವನ್ನು ಚಾರ್ಜ್​ ಮಾಡಲು ಪ್ರಾಣ ಮುದ್ರೆ ಮಾಡಬೇಕು. ಹೆಬ್ಬೆರಳು(ಅಗ್ನಿ ತತ್ವ), ಕಿರುಬೆರಳು(ಜಲ ತತ್ವ) ಮತ್ತು ಉಂಗುರ ಬೆರಳು(ಭೂತತ್ವ) ಮೂರನ್ನೂ ಸ್ಪರ್ಶಿಸಿ ಮಾಡುವ ಮುದ್ರೆಯಿದು. ಈ ಮುದ್ರೆಯನ್ನು ಎರಡೂ ಕೈಗಳಲ್ಲಿ ಧರಿಸಿ ಹತ್ತು ನಿಮಿಷಗಳ ಕಾಲ ‘ಓಂ ಹಿರಣ್ಯಗರ್ಭಾಯ ನಮಃ’ ಎಂಬ ಮಂತ್ರೋಚ್ಚಾರ ಮಾಡಿದರೆ ಒಳ್ಳೆಯದು.

    ಚಿನ್ಮುದ್ರೆ: ಒತ್ತಡ ಆಗದಂತೆ ನಿಯಂತ್ರಿಸಲು ಚಿನ್ಮುದ್ರೆ ಮಾಡುವುದು ಉಪಯುಕ್ತ. ತೋರ್​ಬೆರಳು ವಾಯು ತತ್ವ ಹೊಂದಿರುತ್ತದೆ ಮತ್ತು ಹೆಬ್ಬೆರಳು ಅಗ್ನಿ ತತ್ವ ಹೊಂದಿರುತ್ತದೆ. ಇವೆರಡರ ಅಗ್ರಭಾಗವನ್ನು ಸ್ಪರ್ಶಿಸಿ ಮಾಡುವ ಮುದ್ರೆಯಿದು. ಇದನ್ನು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಜ್ಞಾನ ಮುದ್ರೆ ಅಥವಾ ಜ್ಞಾನ ಸರಸ್ವತಿ ಮುದ್ರೆ ಎಂಬ ಹೆಸರುಗಳೂ ಉಳ್ಳ ಈ ಮುದ್ರೆಯೊಂದಿಗೆ ‘ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತ್ಯೈ ನಮಃ’ ಎಂಬ ಮಂತ್ರವನ್ನು ಹೇಳಬೇಕು. ಇದರಿಂದ ಅಗಾಧವಾದ ನೆನಪಿನಶಕ್ತಿ ಉಂಟಾಗುತ್ತದೆ. ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಚಿನ್ಮುದ್ರೆ ಧರಿಸಿ ಕೂರುವುದು ಕಡ್ಡಾಯವಾಗಿರುತ್ತಿತ್ತು ಎಂದು ಕೆಲವು ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ.

    ಹೃದಯ ಮುದ್ರೆ: ಹೃದಯ ಸಂಬಂಧಿ ಖಾಯಿಲೆ ಇರುವವರು ಹೃದಯ ಮುದ್ರೆಯನ್ನು ಅಭ್ಯಾಸ ಮಾಡಬೇಕು. ಇದನ್ನು ವಾಯು ಆಪಾನ ಮುದ್ರೆ ಅಥವಾ ಮೃತಸಂಜೀವಿನೀ ಮುದ್ರೆ ಎಂದೂ ಕರೆಯಲಾಗುತ್ತದೆ. ಎದೆ ನೋವು ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆ ಎರಡಕ್ಕೂ ಈ ಮುದ್ರೆ ಮಾಡುವುದರಿಂದ ಆರಾಮವಾಗುತ್ತದೆ. ಇದನ್ನು ಹತ್ತು ನಿಮಿಷಗಳ ಕಾಲ ತೊಡೆ ಅಥವಾ ಮಂಡಿಯ ಮೇಲೆ ಕೈಗಳನ್ನಿಟ್ಟು ಅಭ್ಯಾಸ ಮಾಡಬೇಕು. ಇದರೊಂದಿಗೆ 108 ಬಾರಿ ‘ಓಂ ನಮಃ ಶಿವಾಯ’ ಎಂಬ ಮಂತ್ರೋಚ್ಚಾರ ಮಾಡಬೇಕು.

    ಇದನ್ನೂ ಓದಿ: ಬಸ್​ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ! ವಿದ್ಯಾರ್ಥಿಗಳ ಈ ಪಾಡು ನೋಡೋಕಾಗಲ್ಲ

    ಹೃದಯದ ಅಧಿದೇವತೆ ಲಲಿತಾದೇವಿ. ಎಡಗೈಯನ್ನು ಹೃದಯದ ಮೇಲೆ ಮೃದುವಾಗಿ ಸ್ಪರ್ಶಿಸಿಟ್ಟು, ಅದರ ಮೇಲೆ ಬಲಗೈಯನ್ನು ಇಟ್ಟು ಲಲಿತಾದೇವಿಯ ಮಂತ್ರ ಹೇಳಬೇಕು ಎಂದು ದುರ್ಗಾತಂತ್ರ ಗ್ರಂಥದಲ್ಲಿ ಹೇಳಲಾಗಿದೆ. ಅದಕ್ಕಾಗಿ ವಾರಕ್ಕೊಮ್ಮೆಯಾದರೂ, ವಿಶೇಷವಾಗಿ ಮಂಗಳವಾರದಂದು, ‘ಓಂ ಲಂ ಲಲಿತದೇವಿಭ್ಯಾಂ ನಮಃ’ ಎಂಬ ಮಂತ್ರವನ್ನು 108 ಬಾರಿ ಉಚ್ಚರಿಸಬೇಕು. ಇದನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಅಭ್ಯಾಸ ಮಾಡಬೇಕು.

    ಈ ಎಲ್ಲಾ ಮುದ್ರೆಗಳನ್ನು ಅಭ್ಯಾಸ ಮಾಡಿದ ಮೇಲೆ ಕೊನೆಗೆ ಮತ್ತೆ ಪ್ರಾಣಮುದ್ರೆ ಮಾಡಬೇಕು. ಮುದ್ರಾ ಯೋಗವನ್ನು ಚಿಕಿತ್ಸೆಯ ರೂಪದಲ್ಲಿ ಬಳಸುವಾಗ ಆರಂಭದಲ್ಲಿ ಮತ್ತು ಕೊನೆಯಲ್ಲಿ ಪ್ರಾಣಮುದ್ರೆ ಅಭ್ಯಾಸ ಮಾಡಬೇಕು. ಹೃದಯದ ಆರೋಗ್ಯಕ್ಕೆ ಅನಾಹತ ಚಕ್ರ ಉತ್ತಮ ಸ್ಥಿತಿಯಲ್ಲಿರಬೇಕು. ಅದಕ್ಕಾಗಿ ದಿನಕ್ಕೆ 20 ರಿಂದ 30 ನಿಮಿಷ ಹಸಿರು ಬಣ್ಣವನ್ನು ನೋಡಬೇಕು ಎಂದೂ ಹೇಳಲಾಗುತ್ತದೆ.

    ಕನ್ನಡಿಗರ ಕಣ್ಮಣಿ ಹೆಸರಲ್ಲಿ ಕಣ್ಣಿನ ಆಸ್ಪತ್ರೆ; ಈ ಜಿಲ್ಲೆಯ ರಾಯಭಾರಿಯಾಗಿದ್ದ ಪುನೀತ್​ಗೆ ವಿಶಿಷ್ಟ ನಮನ

    VIDEO| ಶ್ವಾಸಕೋಶಗಳಿಗೆ ಜೀವ ತುಂಬುವ ‘ಊರ್ಧ್ವಮುಖ ಶ್ವಾನಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts