ಇದು ರೀಲ್ ಅಲ್ಲ ರಿಯಲ್; ಶೂಟಿಂಗ್ ಸೆಟ್​​​ಗೆ 'ಚಿರತೆ' ಎಂಟ್ರಿ, ಎದ್ದುಬಿದ್ದು ಓಡಿದ ಕಲಾವಿದರು, ತಂತ್ರಜ್ಞರು!

leo
Published on

ಮುಂಬೈ: ನಮ್ಮ ಕಡೆ ಸಾಮಾನ್ಯವಾಗಿ ಎಲ್ಲಿಯಾದರೂ ಶೂಟಿಂಗ್ ನಡೆದರೆ ಜನರು ಗುಂಪು ಗುಂಪಾಗಿ ಬರುವುದನ್ನು ನೋಡಿದ್ದೇವೆ. ಇನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಣಕ್ಕಾಗಿಯೇ ಸ್ಟುಡಿಯೋಗಳನ್ನು ಸ್ಥಾಪಿಸಲಾಗಿದೆ. ಜತೆಗೆ ನಗರವು ಚಿತ್ರೀಕರಣಕ್ಕೆ ತುಂಬಾ ಸುರಕ್ಷಿತವಾಗಿವೆ. ಆದರೆ ಮುಂಬೈನಲ್ಲಿ ಮಾತ್ರ ವಿವಿಧ ಸ್ಟುಡಿಯೋಗಳಿಗೆ ಕಾಡು ಪ್ರಾಣಿಗಳು ಆಗಾಗ ಬರುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಈ ಹಿಂದೆ ಹಿಂದಿ ಸಿನಿಮಾ, ಧಾರಾವಾಹಿಗಳ ಶೂಟಿಂಗ್ ವೇಳೆ ಹಾವು ಮತ್ತಿತರ ಕಾಡುಪ್ರಾಣಿಗಳು ಬರುತ್ತಿದ್ದವು.

ಈ ಬಾರಿ ಮಾತ್ರ ಕಾಣಿಸಿಕೊಂಡಿದ್ದು ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಯಲ್ಲ ಚಿರತೆ. ಹೌದು ಚಿರತೆಯೊಂದು ಮರಿ ಚಿರತೆಯೊಂದಿಗೆ ಬಂದಿದ್ದರಿಂದ ಅಲ್ಲಿದ್ದವರೆಲ್ಲ ಓಡಿ ಹೋಗಿದ್ದಾರೆ. ಸೀರಿಯಸ್ ಆಗಿ ಶೂಟಿಂಗ್ ನಡೆಯುತ್ತಿದ್ದಾಗ ಸೆಟ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇನ್ನೂರು ಮಂದಿಯೂ ಓಡಿದ್ದಾರೆ.

ಘಟನೆಯ ವಿವರ
ಮುಂಬೈನ ಗೋರೆಗಾಂವ್ ಫಿಲ್ಮ್ ಸ್ಟುಡಿಯೋದಲ್ಲಿ ಮರಾಠಿ ಧಾರಾವಾಹಿ ಸುಖ್ ಮಂಜೇ ಕೈ ಆಸ್ತಾದ ಚಿತ್ರೀಕರಣ ನಡೆಯುತ್ತಿತ್ತು. ಸಂಜೆ 4 ಗಂಟೆ ಸುಮಾರಿಗೆ ಎಲ್ಲರೂ ಶೂಟಿಂಗ್​​ನಲ್ಲಿ ನಿರತರಾಗಿದ್ದಾಗ ಆಗ ಅಲ್ಲಿಗೆ ಚಿರತೆ ಬಂದಿದೆ. ಚಿರತೆ ನೋಡಿ ಅಲ್ಲಿದ್ದ ನಟರು ಮತ್ತು ತಂತ್ರಜ್ಞರೆಲ್ಲರೂ ಹೊರನಡೆದಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕುರಿತು ಮಾತನಾಡಿದ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಸುರೇಶ್, ಇತ್ತೀಚಿನ ದಿನಗಳಲ್ಲಿ ಶೂಟಿಂಗ್ ಸೆಟ್‌ಗೆ ಚಿರತೆ ಪ್ರವೇಶಿಸುತ್ತಿರುವುದು ಇದು ನಾಲ್ಕನೇ ಬಾರಿ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಬಗೆಯ ಹಾವು, ಪ್ರಾಣಿಗಳೂ ಶೂಟಿಂಗ್ ಸ್ಪಾಟ್‌ಗೆ ಬರುತ್ತಿದ್ದವು. ಫಿಲ್ಮ್ ಸ್ಟುಡಿಯೋಗಳ ಪಕ್ಕದಲ್ಲಿ ಕಾಡುಗಳಿರುವುದರಿಂದ ಈ ರೀತಿ ಘಟನೆಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net