

ದೆಹಲಿ: ಕಂಝಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗುರುವಾರ ಮಹತ್ವದ ತೀರ್ಪು ನೀಡಿದೆ. ನಾಲ್ವರು ಆರೋಪಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದು, ಆರೋಪ ಪಟ್ಟಿ ಮಾಡಿದೆ. ವರ್ಷದ ಆರಂಭದಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ಅಂಜಲಿ ಎಂಬ ಯುವತಿಗೆ ಡಿಕ್ಕಿ ಹೊಡೆದು ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಪರಿಣಾಮ ಅಂಜಲಿ ದಾರುಣವಾಗಿ ಸಾವನ್ನಪ್ಪಿದ್ದಳು. ಈಗ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 14 ರಂದು ನಡೆಸಲಿದೆ.
ಸಾವನ್ನಪ್ಪಿದ ಅಂಜಲಿ
ಡಿಸೆಂಬರ್ 31, 2022 ರ ರಾತ್ರಿ, ಸುಲ್ತಾನ್‌ಪುರಿ ಪ್ರದೇಶದಲ್ಲಿ ಅಂಜಲಿ ಎಂಬ ಯುವತಿಗೆ ಕಾರು ಡಿಕ್ಕಿ ಹೊಡೆದು 13 ಕಿಲೋಮೀಟರ್ ಎಳೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಅಂಜಲಿ ಕಾರಿನಡಿ ಸಿಲುಕಿರುವುದು ಕಾರಿನಲ್ಲಿದ್ದವರಿಗೆ ಗೊತ್ತಾಗಿದೆ. ಸುಮಾರು 600 ಮೀಟರ್ ದೂರ ಹೋದ ನಂತರ ಆರೋಪಿಗಳು ಕಾರನ್ನು ನಿಲ್ಲಿಸಿದ್ದಾರೆ.
ಇಬ್ಬರಿಗೆ ಜಾಮೀನು ನೀಡಿದ ನ್ಯಾಯಾಲಯ
ಇತ್ತೀಚಿನ ಮಾಹಿತಿಯ ಪ್ರಕಾರ, ದೆಹಲಿಯ ರೋಹಿಣಿ ನ್ಯಾಯಾಲಯವು ಆರೋಪಿಗಳಾದ ಮನೋಜ್ ಮಿತ್ತಲ್, ಅಮಿತ್ ಖನ್ನಾ, ಕ್ರಿಶನ್ ಮತ್ತು ಮಿಥುನ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಸಾಕ್ಷಾಧಾರಗಳನ್ನು ನಾಶಪಡಿಸುವುದು), 212 (ಅಪರಾಧಿಗೆ ಆಶ್ರಯ ನೀಡುವುದು), 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಆರೋಪ ಹೊರಿಸಿದೆ.
ಇದೇ ಸಮಯದಲ್ಲಿ, ಇತರ ಆರೋಪಿಗಳಾದ ದೀಪಕ್, ಅಶುತೋಷ್ ಮತ್ತು ಅಂಕುಶ್ ವಿರುದ್ಧ ನ್ಯಾಯಾಲಯವು 201, 212, 182, 34 ಐಪಿಸಿ ಅಡಿಯಲ್ಲಿ ಆರೋಪ ಹೊರಿಸಿತ್ತು. ಐಪಿಸಿ ಸೆಕ್ಷನ್ 120ಬಿಯಿಂದ ಮೂವರನ್ನು ಬಿಡುಗಡೆ ಮಾಡಲಾಗಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಅಮಿತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.