ಬಾಹುಬಲಿ ಚಿತ್ರದ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್​ಗೆ ಮಾತೃ ವಿಯೋಗ

Kattappa
Published on

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ಬಾಹುಬಲಿಯ ಕಟ್ಟಪ್ಪ ಪಾತ್ರದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ನಟ ಸತ್ಯರಾಜ್​ ಅವರಿಗೆ ಮಾತೃ ವಿಯೋಗವಾಗಿದೆ.

ಸತ್ಯರಾಜ್​ ಅವರ ತಾಯಿ ನಾಥಂಬಳ್ ಕಾಳಿಂಗರಾಯರ್​ 94ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಇಹಲೋಕ ತ್ಯಹಿಸಿದ್ದಾರೆ. ಶುಕ್ರವಾರ 4 ಗಂಟೆಗೆ ಕೊಯಮತ್ತೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಥಂಬಾಳ್‌ ಅವರಿಗೆ ಕಲ್ಪನಾ ಮಂದ್ರಡಿಯರ್ ಮತ್ತು ರೂಪಾ ಸೇನಾಪತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿದ್ದ ಸತ್ಯರಾಜ್ ಸುದ್ದಿ ತಿಳಿದ ತಕ್ಷಣ ಅರ್ಧಕ್ಕೆ ಶೂಟಿಂಗ್​ ನಿಲ್ಲಿಸಿ ಕೋವಿಗೆ ಧಾವಿಸಿದರು. ಚಿತ್ರರಂಗದ ಗಣ್ಯರು ಹಿರಿಯ ನಟನ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಸಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ಸತ್ಯರಾಜ್​ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟ ಸತ್ಯರಾಜ್​, ನಂತರದಲ್ಲಿ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.

ಪ್ರಸ್ತುತ ಸತ್ಯರಾಜ್​ ಅವರು 'ವೆಪನ್' ಸಿನಿಮಾದಲ್ಲಿ ನಟ ವಸಂತ ರವಿ ಜತೆ ನಟಿಸುತ್ತಿದ್ದಾರೆ. ತೆಲುಗು ಮತ್ತು ಮಲಯಾಳಂನ ಸಾಕಷ್ಟು ಸಿನಿಮಾಗಳಲ್ಲಿಯೂ ಸತ್ಯರಾಜ್​ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net