

ಮುಂಬೈ: ಬಾಲಿವುಡ್ನ ಹಿರಿಯ ನಟ ದೇಬ್ ಮುಖರ್ಜಿ (Deb Mukherjee) ಅವರು ಶುಕ್ರವಾರ (ಮಾರ್ಚ್ 14) ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ (ಮಾರ್ಚ್ 14) ಮುಂಜಾನೆ ಮೃತಪಟ್ಟಿರುವುದಾಗಿ ಅವರು ಕುಟುಂಬದವರು ತಿಳಿಸಿದ್ದಾರೆ.
ದೇಬ್ ಮುಖರ್ಜಿ, ಬಾಲಿವುಡ್ನ ಕಲ್ಟ್ ಕ್ಲಾಸಿಕ್ ಸಿನಿಮಾಗಳಾದ ‘ಅಭಿನೇತ್ರಿ’, ‘ಏಕ್ ಬಾರ್ ಮುಸ್ಕುರಾದೊ’, ‘ಆಸೂ ಬನ್ ಗಯೇ ಪೂಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ನಟನೆಯ ಕೊನೆಯ ಸಿನಿಮಾವಾಗಿತ್ತು.
ಬಾಲಿವುಡ್ನ ಖ್ಯಾತ ನಿರ್ದೇಶಕ ಅಯಾಬ್ ಮುಖರ್ಜಿ ಅವರ ತಂದೆಯಾಗಿರುವ ದೇಬ್ ಮುಖರ್ಜಿ (Deb Mukherjee) ಅವರು ನಟನೆಯಿಂದ ಸದ್ಯ ದೂರು ಉಳಿದಿದ್ದಾರೆ. ಅವರಿಗೆ ಎರಡು ಮದುವೆಯಾಗಿದ್ದು, ನಿರ್ದೇಶಕ ಅಯಾನ್ ಮುಖರ್ಜಿ ಎರಡನೇ ಪತ್ನಿಯ ಮಗ ಎಂದು ತಿಳಿದು ಬಂದಿದೆ.
ಶುಕ್ರವಾರ (ಮಾರ್ಚ್ 14) ಸಂಜೆಯೇ ದೇಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಜುಹುವಿನ ಪವನ್ ಹನ್ಸ್ ರುದ್ರಭೂಮಿಯಲ್ಲಿ ಜರುಗಲಿದ್ದು, ಕಾಜೋಲ್, ಅಜಯ್ ದೇವಗನ್, ರಾಣಿ ಮುಖರ್ಜಿ, ತನುಜಾ, ತನಿಶಾ ಮತ್ತು ಆದಿತ್ಯ ಚೋಪ್ರಾ ಸೇರಿದಂತೆ ಬಾಲಿವುಡ್ನ ಪ್ರಮುಖರು ಭಾಗಿಯಾಗುವ ನಿರೀಕ್ಷೆ ಇದೆ.