

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಮೂಲಕ ಐಸಿಸಿಯ ಪ್ರಮುಖ ಟೂರ್ನಿಗೆ ಅಲ್ಪ ವಿರಾಮ ಬಿದ್ದಂತೆ ಕಾಣುತ್ತಿದ್ದು, ಸದ್ಯ ಆಟಗಾರರು ಐಪಿಎಲ್ ಮೂಡ್ನಲ್ಲಿದ್ದಾರೆ. ಐಪಿಎಲ್ ಬಳಿಕ ಇಂಗ್ಲೆಂಡ್ನ ಲಾರ್ಡ್ಸ್ ಅಂಗಳದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ನಡೆಯಲಿದ್ದು, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಐಸಿಸಿಯ ಪ್ರಮುಖ ಈವೆಂಟ್ ಇದೀಗ ನಷ್ಟದ ಸುಲಿಗೆ ಸಿಲುಕಿದ್ದು, ಅದಕ್ಕೆ ಪ್ರಮುಖ ಕಾರಣ ಭಾರತ ಎಂದು ತಿಳಿದು ಬಂದಿದೆ.
ಪ್ರಸ್ತುತ ಕ್ರೀಡಾವಲಯದಲ್ಲಿ ಭಾರತ ಪ್ರಮುಖ ಸಾಧಿಸಿದ್ದು, ಪ್ರಮುಖವಾಗಿ ಕ್ರಿಕೆಟ್ ಕ್ಷೇತ್ರವನ್ನು ಭಾರತ ಆಳುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ವಿಚಾರವಾಗಿಯೂ ಇದೀಗ ಆಯೋಜಕರಿಗೆ ಭಾರೀ ನಷ್ಟ ಉಂಟಾಗಿದ್ದು, ಸದ್ಯ ಈ ಬೆಳವಣಿಗೆ ಆಯೋಜಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಾಸ್ತವವಾಗಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್‌ನಲ್ಲಿ ಭಾಗಿಯಾಗುತ್ತದೆ ಎಂದು ಕ್ರಿಕೆಟ್ ವಲಯ ಊಹಿಸಿತ್ತು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ ಸೋತ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟಿಕೆಟ್ ಕೈತಪ್ಪಿತ್ತು. ಭಾರತ ಫೈನಲ್‌ನಲ್ಲಿ ಆಡುತ್ತದೆ ಎಂದು ಭಾವಿಸಿದ್ದ ಆಯೋಜಕರು ಟಿಕೆಟ್ ದರವನ್ನು ಏರಿಸಿದ್ದರು. ಆದರೆ, ಭಾರತ ಫೈನಲ್‌ನಲ್ಲಿ ಆಡದಿರುವುದರಿಂದ ಟಿಕೆಟ್ ಬೆಲೆಯಲ್ಲಿ ಆಯೋಜಕರು ಇಳಿಕೆ ಮಾಡಿದ್ದು, ಆಯೋಜಕರಿಗೆ ಸರಿಸುಮಾರು 4 ಮಿಲಿಯನ್ ಪೌಂಡ್ (45 ಕೋಟಿ ರೂ.) ನಷ್ಟವಾಗಿರುವುದಾಗಿ ವರದಿಯಾಗಿದೆ.
ವಾಸ್ತವವಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳು ನಡೆಯುವುದಕ್ಕೂ ಮುನ್ನ ಡಬ್ಲ್ಯುಟಿಸಿ ಫೈನಲ್ ರೇಸ್ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು. ಅಲ್ಲದೆ ಕಿವೀಸ್ ತಂಡವನ್ನು ತವರಿನಲ್ಲೇ ಎದುರಿಸುತ್ತಿದ್ದ ಟೀಂ ಇಂಡಿಯಾ ಸುಲಭವಾಗಿ ಸರಣಿ ಗೆದ್ದು ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆಯುತ್ತದೆ ಎಂದು ಆಯೋಜಕರು ಭರವಸೆ ಹೊಂದಿದ್ದರು. ಆದರೆ ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋತ್ತಿದ್ದ ಭಾರತ, ಆ ಬಳಿಕ ಆಸ್ಟ್ರೇಲಿಯಾದಲ್ಲೂ ಸೋಲಿಗೆ ಸುಳಿಗೆ ಸಿಲುಕಿತು. ಅಂತಿಮವಾಗಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯವನ್ನಾಡಲು ಟಿಕೆಟ್ ಪಡೆದುಕೊಂಡವು.
ಡಬ್ಲ್ಯುಟಿಸಿ ಮೂರನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲು ಸಜ್ಜಾಗಿ ನಿಂತಿದೆ. ಆದರೆ ಸತತ ಮೂರನೇ ಬಾರಿಗೆ ಭಾರಿ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮಾತ್ರ ನಷ್ಟದ ಸುಳಿಗೆ ಸಿಲುಕುವ ಆಂತಕದಲ್ಲಿದೆ. ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.