ಬೆಂಗಳೂರು ಕಂಬಳಕ್ಕೆ ವಾಹನ ಸಂಚಾರ ಮಾರ್ಗ ಮಾರ್ಪಾಡು

kambala
Published on

ಬೆಂಗಳೂರು: ಅರಮನೆ ಮೈದಾನದಲ್ಲಿ ಶುಕ್ರವಾರ ನಡೆಯುವ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಹಿನ್ನೆಲೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಪೊಲೀಸರು ಮಾರ್ಪಾಡು ಮಾಡಿದ್ದಾರೆ.

ಸಿಬಿಡಿ ಏರಿಯಾ ದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ತಿರುವು ಪಡೆದು ಮೇಖ್ರಿ ಸರ್ಕಲ್ ಗೇಟ್ ನಂ.1 (ಕೃಷ್ಣವಿಹಾರ್)ನಲ್ಲಿ ಪ್ರವೇಶ ಮಾಡಿ ನಿಲ್ಲಿಸಬೇಕು.

ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ಅಂಡರ್ ಪಾಸ್‌ನಲ್ಲಿ ಬಂದು ಗೇಟ್ ನಂ-1ರಲ್ಲಿ ಪ್ರವೇಶ ಮಾಡಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಕಾರ್ಯಕ್ರಮಕ್ಕೆ ಕಾಲ್ನಡಿಗೆಯಲ್ಲಿ ಹೋಗಬೇಕು. ಕ್ಯಾಬ್‌ಗಳಲ್ಲಿ ಬರುವವರು ಗೇಟ್ 2ರಲ್ಲಿ ಪ್ರವೇಶ ಮಾಡಿ ನಿಗದಿತ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸಿ ಗೇಟ್-3ರ ಮುಖಾಂತರ ನಿರ್ಗಮಿಸಬಹುದು.

ಕಾರ್ಯಕ್ರಮ ಮುಗಿದ ಮೇಲೆ ವಾಪಸ್ ಹೋಗುವಾಗ ಎಲ್ಲ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ನಿರ್ಗಮಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ನೋ ಪಾರ್ಕಿಂಗ್ :

ಅರಮನೆ ರಸ್ತೆ, ಎಂ.ವಿ. ಜಯರಾಮ್ ರಸ್ತೆ, ಸಿ.ವಿ.ರಾಮನ್ ರಸ್ತೆ, ವಸಂತನಗರ ರಸ್ತೆ, ಜಯಮಹಲ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮಲ್ ಕಾಲೇಜು ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.

ಭಾರೀ ಸರಕು ಸಾಗಾಣಿ ವಾಹನ ನಿಷೇಧ :

ಭಾರೀ ಸರಕು ಸಾಗಾಣಿಕೆ ವಾಹನಗಳು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆ ವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net