ವೀರಶೈವ-ಲಿಂಗಾಯತ ವಿಭಜನೆ ಹುನ್ನಾರ

veerashaiva
ಕಾಂತರಾಜ ಆಯೋಗದ ವರದಿ ವಿರೋಧಿಸಿ ವೀರಶೈವ ಲಿಂಗಾಯತ ಜಾಗೃತ ಯುವ ಸಮಾಜದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಎಸ್.ಎಸ್.ಜ್ಯೋತಿಪ್ರಕಾಶ್, ಅನಿತಾ ರವಿಶಂಕರ್, ಬೆನಕಪ್ಪ, ಮಲ್ಲಿಕಾರ್ಜುನ, ಮಧು ಧ್ರುವಕುಮಾರ್ ಮತ್ತಿತರರಿದ್ದರು.
Published on

ಶಿವಮೊಗ್ಗ: ಕಾಂತರಾಜ ಆಯೋಗದ ಅವೈಜ್ಞಾನಿಕ ಜಾತಿ ಜನಗಣತಿಯನ್ನು ಯಾವ ಕಾರಣಕ್ಕೂ ಜಾರಿ ಮಾಡಬಾರದು. ಈ ವರದಿಯಲ್ಲಿ ವೀರಶೈವ ಹಾಗೂ ಲಿಂಗಾಯತ ಎಂದು ವಿಭಜನೆ ಮಾಡಲಾಗಿದೆ. ವಾಸ್ತವದಲ್ಲಿ ಇವರೆಡೂ ಒಂದೇ ಆಗಿದೆ ಎಂದು ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

ಕಾಂತರಾಜ ಆಯೋಗದ ವರದಿ ಸುಮಾರು 10 ವರ್ಷ ಹಳೆಯದು ಹಾಗೂ ಅವೈಜ್ಞಾನಿಕ. ಈಗ ಇದನ್ನು ಬಿಡುಗಡೆ ಮಾಡುವ ಅವಶ್ಯಕತೆಯೇ ಇರಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಸಮಾಜದ ಜನಸಂಖ್ಯೆಯನ್ನು ತುಂಬ ಕಡಿಮೆ ನಮೂದಿಸಲಾಗಿದೆ. ರಾಜ್ಯದಲ್ಲಿ ನಾವು ಸುಮಾರು ಎರಡು ಕೋಟಿಯಷ್ಟಿದ್ದೇವೆ. ಆದರೆ ಸುಮಾರು 75 ಲಕ್ಷ ಜನಸಂಖ್ಯೆ ಎಂದು ನಮೂದಿಸಲಾಗಿದೆ. ಯಾವ ಕಾರಣಕ್ಕೂ ಸರ್ಕಾರ ಈ ವರದಿಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಪ್ರಮುಖರಾದ ಎಚ್.ಶಾಂತಾ ಆನಂದ್, ಅನಿತಾ ರವಿಶಂಕರ್, ಬಳ್ಳೇಕೆರೆ ಸಂತೋಷ್, ರೇಣುಕಾರಾಧ್ಯ, ಚನ್ನಬಸಪ್ಪ, ಪಿ.ರುದ್ರೇಶ್, ಬೆನಕಪ್ಪ, ಸಿ.ಮಹೇಶ್‌ಮೂರ್ತಿ, ಗಂಗಾಧರ್, ಚಟ್ನಳ್ಳಿ ರುದ್ರೇಶ್, ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net