ವಿಜಯ್ ದೇವರಕೊಂಡ ಚಿತ್ರಕ್ಕೆ ಈ ಹಾಟ್ ಬೆಡಗಿಯೇ ನಾಯಕಿ! ಕಡೆಗೂ ಹೊರಬಿತ್ತು ನಟಿಯ ಸಿಕ್ರೇಟ್​

ವಿಜಯವಾಣಿ - 2024-07-25T105233.383
Published on

ಆಂಧ್ರಪ್ರದೇಶ: ಸದ್ಯ ಟಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಕಾಣಲು ಸಜ್ಜಾಗಿದ್ದು, ಸ್ಟಾರ್ ನಟರ ಚಿತ್ರಗಳು ಮುಂಚೂಣಿಯಲ್ಲಿವೆ. ಈ ಪೈಕಿ ತೆಲುಗು ಚಿತ್ರರಂಗದ ಸೆನ್ಸೇಷನಲ್ ಹೀರೋ, ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ವಿಡಿ12' ಚಿತ್ರದ ಬಗ್ಗೆ ಇದೀಗ ಸಿನಿಪ್ರೇಕ್ಷಕರ ಕುತೂಹಲ ಹೆಚ್ಚಿದ್ದು, ಶೀಘ್ರವೇ ದೇವರಕೊಂಡ ಅವರ ಫಸ್ಟ್​ ಲುಕ್​ ಬಿಡುಗಡೆಗೊಳಿಸಲಿದ್ದೇವೆ ಎಂದು ಇತ್ತೀಚೆಗಷ್ಟೇ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇನ್ನು ಈ ಮಧ್ಯೆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಪ್ರಸ್ತುತ ಕೆಲವು ಭಾಗಗಳ ಶೂಟಿಂಗ್​ಗಾಗಿ ಚಿತ್ರತಂಡ ಶ್ರೀಲಂಕಾಗೆ ತೆರಳಿದೆ. ಗೌತಮ್ ತಿನ್ನೂರಿ ನಿರ್ದೇಶನದ 'ವಿಡಿ 12' ಸಿನಿಮಾಗೆ ಹೀರೋ ಯಾರು ಎಂಬುದು ಸಿನಿಪ್ರಿಯರಿಗೆ ಈ ಮುಂಚಿತವಾಗಿಯೇ ತಿಳಿದಿತ್ತು. ಆದ್ರೆ, ವಿಜಯ್​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್​ ಅಥವಾ 'ಅನಿಮಲ್' ನಾಯಕಿ ತ್ರಿಪ್ತಿ ದಿಮ್ರಿ? ಯಾರು ಬೆಳ್ಳಿಪರದೆಯ ಮೇಲೆ ಮೋಡಿ ಮಾಡುತ್ತಾರೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬಂದಿತ್ತು. ಇದೆಲ್ಲದರ ನಡುವೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, 'ಮಿಸ್ಟರ್​ ಬಚ್ಚನ್' ಖ್ಯಾತಿಯ ಭ್ಯಾಗ್ಯಶ್ರೀ ಬೋರ್ಸೆ ವಿಡಿ 12 ಚಿತ್ರಕ್ಕೆ ಪ್ರಮುಖ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ

ಇದು ಭ್ಯಾಗ್ಯಶ್ರೀ ಅವರ ಎರಡನೇ ತೆಲುಗು ಚಿತ್ರವಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಅಧಿಕೃತವಾಗಿ ಘೋಷಣೆ ಮೂಲಕ ಕಡೆಗೂ ಫುಲ್​ಸ್ಟಾಪ್ ಇಟ್ಟಿದ್ದಾರೆ. ಆದ್ರೆ, ಈ ಕುರಿತು ಚಿತ್ರತಂಡ ಮಾತ್ರ ಇಲ್ಲಿಯವರೆಗೆ ಯಾವುದೇ ಪೋಸ್ಟ್ ಹಾಕಿಲ್ಲ. ಸಿತಾರಾ ಎಂಟರ್​​ಟೈನ್​ಮೆಂಟ್ಸ್​​ ಬ್ಯಾನರ್​ನಡಿ ಮೂಡಿಬರುತ್ತಿರುವ 'ವಿಡಿ 12' ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಮಾಹಿತಿಗಾಗಿ ಸದ್ಯ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net