BBKS10: 'ಆನೆ' ಪಳಗಿಸೋಕೆ ಮಾವುತ ರೆಡಿ!

Untitled design (39)
Published on

ಬೆಂಗಳೂರು: ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್​ ಘೋಷಣೆಗೂ ಮುನ್ನವೇ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದ ವರ್ತೂರು ಸಂತೋಷ್​, ನನಗೆ ಮನೆಯಲ್ಲಿ ಉಳಿಯಲು ಇಷ್ಟವಿಲ್ಲ, ನನ್ನನ್ನು ಕಳಿಸಿಬಿಡಿ ಎಂದು ಮನವಿ ಮಾಡಿದರು. ಬರೋಬ್ಬರಿ 34 ಲಕ್ಷ ಮತಗಳನ್ನು ಪಡೆದರೂ ಕೂಡ ಹೊರ ನಡೆಯಲು ಇಚ್ಛಿಸಿದ ಸಂತೋಷ್​ಗೆ ಇತರೆ ಸದಸ್ಯರು ಮನವೊಲಿಸಲು ವಿಫಲರಾದರು. ಇದೀಗ ಸ್ಪರ್ಧಿಗಳ ನಡುವೆ 'ರಾಜ' ಮತ್ತು 'ಗುಲಾಮ' ಸ್ಥಾನಗಳ ಹಣಾಹಣಿ ನಡೆದಿದೆ.

ಪ್ರತಿಸ್ಪರ್ಧಿಗಳೊಡನೆ ಕುಳಿತು ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದ್ದ ಸಂತೋಷ್​ಗೆ ಬಿಗ್ ಬಾಸ್​ ಅವರ ತಾಯಿಯನ್ನೇ ಮನೆಯೊಳಗೆ ಕಳುಹಿಸಿದರು. ಅಮ್ಮನ ಪ್ರೀತಿ ಹಾಗೂ ಧೈರ್ಯದ ಮಾತುಗಳ ಕೇಳಿ ಮತ್ತಷ್ಟು ಭಾವುಕರಾದ ವರ್ತೂರು ಸಂತೋಷ್​, 'ಇವಾಗ ಗೇಮ್​ ಸ್ಟಾರ್ಟ್'​ ಎಂದು ಹೇಳುವ ಮೂಲಕ ಮನೆಯಲ್ಲಿ ಆಟ ಮುಂದುವರಿಸುವೆ ಎಂದು ಸೂಚಿಸಿದರು.

ಇದೀಗ ಬಿಗ್​ ಬಾಸ್​ 'ರಾಜ' ಮತ್ತು 'ಗುಲಾಮ' ಪಟ್ಟವನ್ನು ಅವರವರ ದೃಷ್ಟಿಕೋನದಂತೆ ಯಾವ ಸ್ಥಾನವನ್ನು ನೀಡುತ್ತೀರಿ ತಿಳಿಸಿ ಎಂದು ಸೂಚಿಸಿದರು. ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಸ್ಪರ್ಧಿಗಳು, ವಿನಯ್​ಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ರಾಜ ಪಟ್ಟವನ್ನು ಕೊಟ್ಟರು. ಅವರ ಬೆನ್ನಲ್ಲೇ ಗುಲಾಮ ಪಟ್ಟವನ್ನು ಇಶಾನಿಗೆ ನೀಡಿದರು.

ವಿನಯ್​ಗೆ ಸಿಕ್ಕ ಸ್ಥಾನ ಕುರಿತು ಅಸಮಾಧಾನ ಹೊರಹಾಕಿದ ವರ್ತೂರು ತಮ್ಮದೇ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಂತೋಷ್ ಯಾವ ವಿಚಾರವನ್ನು ಉಲ್ಲೇಖಿಸಿ​ ಹೇಳಿದ್ದು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net