ವರ್ತೂರು ಸಂತೋಷ್​ಗೆ ಜಾಮೀನು; ಪಟಾಕಿ ಸಿಡಿಸಿ ಸಂಭ್ರಮ

Untitled design - 2023-10-27T210831.513
Published on

ಬೆಂಗಳೂರು: ಹುಲಿ ಉಗುರು ಪೆಂಡೆಂಟ್​ ಧರಿಸಿದ ಆರೋಪದ ಮೇಲೆ ಬಿಗ್​ಬಾಸ್​ ಮನೆಯಿಂದಲೇ ಬಂಧನವಾಗಿದ್ದ ವರ್ತೂರು​ ಸಂತೋಷ್​ಗೆ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಇಂದು ಜಾಮೀನು ನೀಡಿದೆ. ಸಂತೋಷ್​ ಜೈಲಿನಿಂದ ರಿಲೀಸ್ ಆಗಿದ್ದೇ ತಡ ಅವರ ಊರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಜಾಮೀನು ಪಡೆದ ನಂತರ ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ವರ್ತೂರು ಸಂತೋಷ್​ ಮತ್ತೆ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಾರಾ ಅಥವಾ ಹೋಗದೆ ಹೊರ ಉಳಿಯುತ್ತಾರ ಎಂಬುದು. ಸದ್ಯ ಈ ವಿಷಯ ಇದೀಗ ತೀವ್ರ ಚರ್ಚೆಯಾಗುತ್ತಿದೆ.

ಸಂತೋಷ್​ ಅವರಿಗೆ 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಇದಾದ ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸಂತೋಷ್​ ಬಿಡುಗಡೆ ಮಾಡಲಾಯಿತು. ಜೈಲಿನ ಹೊರಗಡೆ ಅವರನ್ನು​ ಕರೆದುಕೊಂಡು ಹೋಗಲು ಕಲರ್ಸ್​ ಕನ್ನಡ ಚಾನೆಲ್​ ವತಿಯಿಂದ ಕಾರೊಂದು ಜೈಲಿನ ಬಳಿ ನಿಂತಿದ್ದು, ಸಂತೋಷ್​ ಮತ್ತೆ ಬಿಗ್​ಬಾಸ್​ ಮನೆ ತಲುಪುದು ಖಚಿತವಾಗಿದೆ.

ಈ ಬಗ್ಗೆ ಬಿಗ್​ ಬಾಸ್​ ತಂಡ ಹೇಳುವುದೇನು? ಹೊರಡಿಸಲಿರುವ ಅಧಿಕೃತ ಘೋಷಣೆಗೆ ನಿರೀಕ್ಷಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net