ಗಾಯನ ಸ್ಪರ್ಧೆಯಲ್ಲಿ ವರ್ಷಿಣಿ ಪ್ರಥಮ

22bhr 6
ಬಾಳೆಹೊನ್ನೂರಿನ ವಿದ್ಯಾಗಣಪತಿ ಮಹೋತ್ಸವದಲ್ಲಿ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಧರ್ಮಪ್ಪ ಗೌಡ, ಶಿವರಾಮ್, ಸುರೇಂದ್ರ, ಸುನೀಲ್, ನಾರಾಯಣ್, ಶ್ರೀನಿವಾಸ ಗೌಡ ಇತರರಿದ್ದರು.
Published on

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯ ಗಣೇಶೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್‌ನಿಂದ ಗುರುವಾರ ಆಯೋಜಿಸಿದ್ದ ಚಿತ್ರಗೀತೆ ಗಾಯನ ಸ್ಪರ್ಧೆಯಲ್ಲಿ ವರ್ಷಿಣಿ ಹರಿಹರಪುರ ಪ್ರಥಮ, ಸುನೀಲ್ ಡಿಸೋಜ ಹಲಸೂರು ದ್ವಿತೀಯ, ದೀಪಕ್ ಮಲ್ಲಂದೂರು ತೃತೀಯ ಸ್ಥಾನ ಪಡೆದರು.

35 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತರಿಗೆ ನಗದು, ಟ್ರೋಫಿ ವಿತರಿಸಲಾಯಿತು. ಗಣಪತಿ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪ ಗೌಡ ಕಲ್ಮಕ್ಕಿ, ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಸದಸ್ಯರಾದ ಎ.ಸಿ.ಕೃಷ್ಣಮೂರ್ತಿ, ಎಂ.ವಿ.ಶ್ರೀನಿವಾಸ ಗೌಡ, ಕೆ.ನಾರಾಯಣ್ ತುಪ್ಪೂರು, ರಾಜಪ್ಪ ಗೌಡ ಹುಣಸೇಹಳ್ಳಿ, ಎಚ್.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net