ವರಮಹಾಲಕ್ಷ್ಮಿ ಹಬ್ಬಕ್ಕೆ ಮಾಡಿ ರುಚಿಕರವಾದ ಗಸಗಸೆ ಪಾಯಸ, ಕಾಯಿ ಹೋಳಿಗೆ

kayiholige
Published on

ರಮಹಾಲಕ್ಷ್ಮಿ ಹಬ್ಬವೆಂದರೆ, ಅತ್ಯಂತ ಸಂತೋಷ ಏಕಂದರೆ, ಬೇಡಿದ ವರವನ್ನು ದೇವಿ ನೀಡುತ್ತಾಳೆ ಎನ್ನುವ ಕಾರಣದಿಂದ ಮಹಿಳೆಯರಿಗೆ ಈ ಹಬ್ಬ ವಿಶೇಷ. ಈ ಹಬ್ಬದಂದು ಸಿಹಿ ಅಡುಗೆ ಮಾಡಬೇಕು ಎಂದುಕೊಂಡಿರುವ ಮಹಿಳೆಯರಿಗಾಗಿ ನಾವು ಇಂದು ಗಸಗಸೆ ಹಾಗೂ ಕಾಯಿ ಹೋಳಿಗೆ ಮಾಡುವ ವಿಧಾನ ಹೇಳುತ್ತೇವೆ.

kayi holige recipe

ತುಪ್ಪ – 3 ಚಮಚ

ಅಕ್ಕಿ – 3 ಚಮಚ

ಕಾಯಿಸಿದ ಹಾಲು – 1 ಲೋಟ

ಬೆಲ್ಲದ ಪುಡಿ – ಅರ್ಧ ಕಪ್​

ಬಾದಾಮಿ,ಗೋಡಂಬಿ, ಒಣದ್ರಾಕ್ಷಿ- ಸ್ವಲ್ಪ

ಏಲಕ್ಕಿ, ಲವಂಗ – 2

ಕೊಬ್ಬರಿ ತುರಿ – ಅರ್ಧ ಸ್ವಲ್ಪ

ಗಸಗಸೆ – ಅರ್ಧ ಕಪ್​

ಬೇಕಾಗುವ ಸಾಮಗ್ರಿಗಳು:

ಗಸಗಸೆ ಪಾಯಸ:

* ತುಪ್ಪದಲ್ಲಿ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಸ್ವಲ್ಪ ಹುರಿದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಗಸಗಸೆ ಪಾಯಸ ಸಿದ್ದವಾಗುತ್ತದೆ.

* ಹಸಿ ಕೊಬ್ಬರಿ ತುರಿ, ಅಕ್ಕಿ ಮತ್ತು ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿ ಸ್ವಲ್ಪ ನೀರು ಸೇರಿಸಿ ಒಂದು ಪಾತ್ರೆಗೆ ಹಾಕಿಕೊಂಡು ಒಂದು ಕುದಿ ಕುದಿಯಲು ಇಟ್ಟುಕೊಳ್ಳಬೇಕು. ಸ್ವಲ್ಪ ಮಸಯದ ನಂತರ ಹಾಲು ಹಾಗೂ ಬೆಲ್ಲ, ಏಲಕ್ಕಿ. ಲವಂಗ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕುದಿಸಿಬೇಕು.

ಮಾಡುವ ವಿಧಾನ: * ಗಸಗಸೆ, ಅಕ್ಕಿ ಬೇರೆಬೇರೆಯಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು.

ಉಪ್ಪು – ಸ್ವಲ್ಪ ( ಬೇಕಾದಲ್ಲಿ ಮಾತ್ರ)

ಅರಸಿನ ಪುಡಿ – ಅರ್ಧ ಚಮಚ

ಏಲಕ್ಕಿ ಪುಡಿ – ಅರ್ಧ ಚಮಚ

ಬೆಲ್ಲ – 1 ಕಪ್

ತೆಂಗಿನ ತುರಿ – 2 ಕಪ್

ಅಡುಗೆಎಣ್ಣೆ – ಅರ್ಧ ಕಪ್​​

ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – 2ಕಪ್

ಕಾಯಿ ಹೋಳಿಗೆ:

* ನಂತರ ಒಂದು ಬೇಕಿಂಗ್ ಹಾಳೆಯ ಮೇಲೆ ಎಣ್ಣೆ ಸವರಿ, ಹೂರಣ ತುಂಬಿದ ಹಿಟ್ಟಿನ ಉಂಡೆಗಳನ್ನು ಲಟ್ಟಿಸಿಕೊಳ್ಳಿ. ನಂತರ ಬೇಕಿಂಗ್ ಹಾಳೆಯಿಂದ ಬೇರ್ಪಡಿಸಿ ತವಾಗೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಕಾಯಿ ಹೋಳಿಗೆ ಸಿದ್ಧವಾಗುತ್ತದೆ.

* ನಂತರ ಕಲಸಿಟ್ಟ ಮೈದಾ ಹಿಟ್ಟಿನಿಂದ ಸಣ್ಣ ಉಂಡೆ ತೆಗೆದುಕೊಂಡು, ಬೆರಳುಗಳಿಂದ ಅಗಲ ಮಾಡಿ. ಈಗ ಕಾಯಿ ಹೂರಣವನ್ನು ಇದರ ಒಳಗಡೆ ಇಟ್ಟು, ಹೂರಣ ತುಂಬಿದ ಹಿಟ್ಟಿನ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.

* ಒಂದು ಬಾಣಲೆಗೆ ಬೆಲ್ಲ, ನೀರು ಹಾಕಿ ಬೆಲ್ಲ ಕರಗುವ ತನಕ ಬಿಸಿಮಾಡಿ. ತರಿ ತರಿಯಾಗಿ ರುಬ್ಬಿದ ತೆಂಗಿನ ತುರಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ.

* ಈಗ ಒಂದು ಪಾತ್ರೆಗೆ 2 ಕಪ್ ತೆಂಗಿನ ತುರಿಯನ್ನು ತರಿ ತರಿಯಾಗಿ ರುಬ್ಬಿ ಹಾಕಿ.

ಮಾಡುವ ವಿಧಾನ: * ಒಂದು ಪಾತ್ರೆಗೆ 2 ಕಪ್ ಮೈದಾ ಹಿಟ್ಟು, ಅರಸಿನಪುಡಿ, ಉಪ್ಪು, ಅಡುಗೆ ಎಣ್ಣೆ, ಸ್ವಲ್ಪ ನೀರು ಹಾಕಿ ಮೆತ್ತಗೆ ಕಲಸಿಟ್ಟುಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net