ಆರೋಗ್ಯಕ್ಕೂ ರುಚಿಗೂ ಬೆಸ್ಟ್ ಸಬ್ಬಕ್ಕಿ ದೋಸೆ

dosa
Published on

ಬೆಂಗಳೂರು: ಶ್ರಾವಣ ಮಾಸದಲ್ಲಿ ಉಪವಾಸವಿದ್ದು, ಪೂಜೆ ಮಾಡಿದರೆ ಸಂಜೆಯ ವೇಳೆಗೇ ಫಲವೂ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಸಮಯದಲ್ಲಿ ಕೆಲವರು ಅನ್ನ ಬಳಸಿ ಮಾಡುವ ಅಡುಗೆಯನ್ನೂ ಸೇವಿಸುವುದಿಲ್ಲ. ಆದ್ದರಿಂದ ಈ ಅವಧಿಯಲ್ಲಿ ಹೆಲ್ತಿಯಾಗಿರುವ ರೆಸಿಪಿ ಸೇವಿಸಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಇಲ್ಲಿ ರುಚಿಯಾಗಿರುವ, ಆರೋಗ್ಯಕರ ಸಬ್ಬಕ್ಕಿ ದೋಸೆ ಮಾಡುವುದು ಹೇಗೆಂದು ಕೊಡಲಾಗಿದೆ. ಒಮ್ಮೆ ಟ್ರೈ ಮಾಡಿ...ನಿಮಗೂ ಇಷ್ಟವಾಗಬಹುದು.

ಬೇಕಾಗುವ ಪದಾರ್ಥಗಳು
ಸಬ್ಬಕ್ಕಿ 3 ಕಪ್
ಕಡಲೆಕಾಯಿ 1 ಕಪ್
ಪನೀರ್ 100 ಗ್ರಾಂ
ಹಸಿರು ಮೆಣಸಿನಕಾಯಿ 4
ಕಾಳುಮೆಣಸು ಪುಡಿ 1 ಟೀಸ್ಪೂನ್
ತುಪ್ಪ
ಕಲ್ಲುಪ್ಪು

ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿ ನೆನೆಸಿ. ಪನೀರ್ ಅನ್ನು ಒಂದು ಕಡೆ ತುರಿದಿಟ್ಟುಕೊಳ್ಳಿ. ಕಡಲೆಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ, ಮಿಕ್ಸರ್ ಜಾರ್‌ನಲ್ಲಿ ಕಡಲೆಕಾಯಿ, ಹಸಿರು ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ. ಈಗ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ನೆನೆಸಿ ರುಬ್ಬಿದ ಸಬ್ಬಕ್ಕಿ ಮತ್ತು ಕಡಲೆಕಾಯಿ-ಮೆಣಸಿನಕಾಯಿ ಪೇಸ್ಟ್ ಅನ್ನು ಸೇರಿಸಿ, ಇದಕ್ಕೆ ಕರಿಮೆಣಸಿನ ಪುಡಿ ಮತ್ತು ಸ್ವಲ್ಪ ಕಲ್ಲು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿದರೆ ಹಿಟ್ಟು ತಯಾರಾಗುತ್ತದೆ.

ಈಗ ನಾನ್ ಸ್ಟಿಕ್ ಗ್ರಿಡಲ್ ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ತುಪ್ಪವನ್ನು ಹರಡಿ, ಹಿಟ್ಟನ್ನು ಹುಯ್ಯಿರಿ. ದೋಸೆಯನ್ನು ಸ್ವಲ್ಪ ಸಮಯ ಬೇಯಿಸಿ ನಂತರ ಪನೀರ್ ಸ್ಟಫಿಂಗ್ ಅನ್ನು ಮಧ್ಯದಲ್ಲಿ ಹರಡಿ, ಬೆಂದ ನಂತರ ತೆಗೆದರೆ ರುಚಿ ರುಚಿಯಾದ ಬಿಸಿ ಬಿಸಿ ಸಬ್ಬಕ್ಕಿ ದೋಸೆ ರೆಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net