ರಾಷ್ಟ್ರ ನಿರ್ವಣಕ್ಕೆ ಕೊಡುಗೆ ನೀಡಿದ 10,000 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಶ್ರಮಿಕ ಕಾರ್ವಿುಕರು, ಆಟೋ ರಿಕ್ಷಾ ಚಾಲಕಿಯರು, ಪೌರ ಕಾರ್ವಿುಕರು, ಆರೋಗ್ಯ ಸೇವೆಗಳ ಮುಂಚೂಣಿ ಕಾರ್ಯಕರ್ತರು, ಸಾಧಕ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಸೇರಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಶ್ರೀಸಾಮಾನ್ಯರು ಪಾಲ್ಗೊಳ್ಳಲಿದ್ದು, ಕರ್ತವ್ಯಪಥದ ಸಂಭ್ರಮಕ್ಕೆ ಸಾರ್ಥಕತೆ ಮೂಡಲಿದೆ. ಕರ್ನಾಟಕದಿಂದಲೂ ಹಲವು ರಂಗಗಳ ತೆರೆಮರೆಯ ಸಾಧಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಸಾಮಾನ್ಯರನ್ನು ಗಣರಾಜ್ಯೋತ್ಸವ ಸಮಾರಂಭ ವೀಕ್ಷಿಸಲು ವಿಶೇಷ ಆಮಂತ್ರಣ ನೀಡುವ ಪದ್ಧತಿ 2022ರಿಂದ ಪ್ರಾರಂಭವಾಗಿದೆ.