

ಬೆಂಗಳೂರು: ರಾಜ್ಯದಲ್ಲಿ ಕೈಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 50 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತುಮಕೂರು ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ ಕೇವಲ 10 ವರ್ಷದೊಳಗೆ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿ, ಪದೇಪದೆ ಕಾಮಗಾರಿಗಳನ್ನು ಕೈಗೊಳ್ಳುವುದು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವರು ಹೊಸ ಕಾಮಗಾರಿ ಮಾಡುವಾಗ 50ವರ್ಷಗಳ ಅಭಿವೃದ್ಧಿ ಗಮದಲ್ಲಿಡುವಂತೆ ಸೂಚನೆ ನೀಡಿದ್ದಾರೆ ಎಂದರು.
ನೆಲಮಂಗಲ-ತುಮಕೂರು, ತುಮಕೂರು& ಶಿರಾ, ಶಿರಾ& ಚಿತ್ರದುರ್ಗವರೆಗೆ ರಾ.ಹೆ. 48ರ ಚತುಷ್ಪಥ ಕಾಮಗಾರಿ ನಡೆಯಲಿದೆ. ಮೊದಲ ಹಂತದಲ್ಲಿ ನೆಲಮಂಗಲ& ತುಮಕೂರು ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಳೆದೆರಡು ವರ್ಷದಿಂದ 2 ಕಿ.ಮೀ. ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಕೆಲಸವನ್ನು ಶ್ರೀ ಪೂರ್ಣಗೊಳಿಸಬೇಕು ಎಂದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 206 ಮಲ್ಲಸಂದ್ರ& ಕರಡಿ 90 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಎನ್ಎಚ್ 105(ಎ) ಕೆಬಿ ಕ್ರಾಸ್, ತುರುವೆಕೆರೆ ಮಲ್ಲಸಂದ್ರ, ನೆಲ್ಲಿಗೆರೆ ದ್ವಿಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 5 ವರ್ಷಗಳ ಹಿಂದೆ ಭೂಸ್ವಾಧಿನ ಮಾಡಲಾಗಿತ್ತು. ಮಾರ್ಗ ಮಧ್ಯೆ 2 ಕಿ.ಮೀ ರಸ್ತೆಯನ್ನು ಬಿಟ್ಟು ಉಳಿದೆಡೆ ಕಾಮಗಾರಿ ಪೂರ್ಣಗೊಳಿಸಿದ್ದರು. ಈ ಪ್ರದೇಶದ ಜನರಿಗೆ ಪರಿಹಾರ ಸಿಗದೇ ಪರದಾಡುತ್ತಿದ್ದಾರೆ. ಅವರಿಗೆ ಶ್ರೀವೇ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವರ ಜತೆಗೆ ಮಾತುಕತೆ ನಡೆಸಲಾಗುತ್ತದೆ ಭರವಸೆ ನೀಡಿದರು.
ರಾಜ್ಯದಲ್ಲಿ ಪ್ರಗತಿಯಲ್ಲಿ 6,400 ಕೋಟಿ ರೂ. ವೆಚ್ಚದ 375 ಕಿ.ಮೀ. ವ್ಯಾಪ್ತಿಯ ಹುಳಿಯಾರ್ ದ್ವಿಪಥ ರಸ್ತೆ, ಶಿರಾ-ಆಂಧ್ರ ಗಡಿ ದ್ವಿಪಥ ರಸ್ತೆ, ಚಳ್ಳಕೆರೆ-ಹಿರಿಯೂರು ಚತುಷ್ಟಥ, ಹಿರಿಯೂರು-ಹುಳಿಯಾರ್ ದ್ವಿಪಥ, ಹೊಸದುರ್ಗ-ಹೊಳಲ್ಕೆರೆ ದ್ವಿಪಥ, ಮದುಗಿರಿ-ಚಿಕ್ಕಬಳ್ಳಾಪುರ ದ್ವಿಪಥ ಹಾಗೂ ಚತುಷ್ಪಥ, ಗೌರಿಬಿದನೂರು ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ, ಗೌರಿಬಿದ್ದನೂರು ಪಟ್ಟಣದಲ್ಲಿನ ಅಭಿವೃದ್ಧಿ ಕಾಮಗಾರಿ ಸೇರಿ 12 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಮಳವಳ್ಳಿ-ಮದ್ದೂರು-ಕುಣಿಗಲ್-ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ-ಕಲ್ಯಾಣದುರ್ಗ-ಬಳ್ಳಾರಿ ಸಂಪರ್ಕಿಸುವ 347 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
1000 ಕೋಟಿ ರೂ. ಮೊತ್ತದಲ್ಲಿ ಸಿರಾ& ಮಧುಗಿರಿ ಬೈರೆನಾಹಳ್ಳಿ 52 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ, 2500 ಕೋಟಿ ರೂ. ಮೊತ್ತದಲ್ಲಿ 45 ಕಿಮೀ ತುಮಕೂರು ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ, ಹಳೇ ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು ನಗರದಲ್ಲಿ ಭಟವಾಡಿಯಿಂದ ಮಲ್ಲಸಂದ್ರವರೆಗೆ, ಗುಬ್ಬಿ ಪಟ್ಟಣದಲ್ಲಿ ಚತುಷ್ಪಥ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಅಂದಾಜು 250 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಅನುಮೋದನೆಗಾಗಿ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ವಿ. ಸೋಮಣ್ಣ ಸೂಚಿಸಿದರು.