ಹಾವಿನ ತಲೆಯನ್ನು ಜಗಿದು ಸಾಯಿಸಿದ ವ್ಯಕ್ತಿ..!

snake
ಸಾಂದರ್ಭಿಕ ಚಿತ್ರ
Published on

ನೈನಿತಾಲ್​: ವ್ಯಕ್ತಿಯೋರ್ವ ಹಾವಿನ ತಲೆಯನ್ನು ಜಗಿದು ಸಾಯಿಸಿದ ವಿಚಿತ್ರ ಘಟನೆ ಉತ್ತರಾಖಾಂಡ್​ನ ನೈನಿತಾಲ್​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 34 ವರ್ಷದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ವ್ಯಕ್ತಿಯೋರ್ವ ಹಾವನ್ನು ಜಗಿದು ತಿನ್ನುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಸಂಬಂಧಿಸಿದ ವ್ಯಕ್ತಿಯನ್ನು ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಬಂಧಿಸಿ, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಜೈಲಿಗೆ ಕಳುಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅರಣ್ಯಾಧಿಕಾರಿ, ಆತನಿಗೆ ಆಧಾರ್ ಅಥವಾ ಯಾವುದೇ ಗುರುತಿನ ಚೀಟಿ ಇಲ್ಲ. ಆರೋಪಿ ಯಾಕೆ ಇಂತಹ ಕೃತ್ಯ ಎಸಗಿದ್ದಾನೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಮಾನಸಿಕವಾಗಿ ಸದೃಢನಾಗಿದ್ದಾನೆ ಎಂಬುದು ಖಚಿತವಾಗಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net