

ಆಂಧ್ರಪ್ರದೇಶ: ಆಗಸ್ಟ್ 12 ರಂದು ಫಣಿದೀಪ್ ನಿರ್ದೇಶನದಲ್ಲಿ ತೆರೆ ಮೇಲೆ ಮೂಡಿಬಂದ ತೆಲುಗು ಸಿನಿಮಾ 'ಉಸ್ತಾದ್' ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ನಟ ಸಿಂಹ ಕೊಡೂರಿ ಮತ್ತು ಕಾವ್ಯ ಕಲ್ಯಾಣ್ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ.
ಫಣಿದೀಪ್ ಬರೆದು, ನಿರ್ದೇಶಿಸಿದ ಚಿತ್ರದಲ್ಲಿ ನಟ ಸಿಂಹ ಕೊಡೂರಿ ಪೈಲೆಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ರಜನಿ ಕೊರ್ರಪಾಟಿ, ರಾಕೇಶ್ ರೆಡ್ಡಿ ಗದ್ದಂ ಮತ್ತು ಹಿಮಾಂಕ್ ರೆಡ್ಡಿ ದುವ್ವೂರು ನಿರ್ಮಾಣದ ಉಸ್ತಾದ್ ಇದೀಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಸಿನಿಪ್ರೇಕ್ಷಕರಿಗೆ ಚಿತ್ರವು ಈಗ ಸ್ಟ್ರೀಮಿಂಗ್ಗೆ ಲಭ್ಯವಿದೆ.
ಚಿತ್ರಕ್ಕೆ ಅಕೀವ ಅವರು ಸಂಗೀತ ಸಂಯೋಜಿಸಿದ್ದು, ಪವನ್ ಕುಮಾರ್ ಪುಪ್ಪಳ ಛಾಯಾಗ್ರಹಣವಿದೆ. ಕಾರ್ತಿಕ್ ಕಟ್ಸ್ ಸಂಕಲನ ಸಿನಿಮಾಗೆ ಮತ್ತಷ್ಟು ವಿಶೇಷತೆಯನ್ನು ತಂದುಕೊಟ್ಟಿದ್ದು, ಇದೀಗ ಸಿನಿಮಾ ಅಮೇಜಾನ್ ಪ್ರೈಮ್ ವೀಡಿಯೊದಲ್ಲಿ ವೀಕ್ಷಣೆಗೆ ಲಭ್ಯವಿರುವುದು ಚಿತ್ರರಸಿಕರಿಗೆ ಸಂತಸ ನೀಡಿದೆ,(ಏಜೆನ್ಸೀಸ್).