

ಬೆಂಗಳೂರು: ವಿಶ್ವ ಗ್ರಾಹಕರ ಹಕ್ಕುಗಳ ದಿನ-2022ರ ಸಂದರ್ಭದಲ್ಲಿ ಬಳಕೆದಾರರ ರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆಯ ಮಹತ್ವವನ್ನು ಕೂ ಅಪ್ಲಿಕೇಷನ್ ಪುನರುಚ್ಚರಿಸುತ್ತಿದ್ದು, ಸಾಮಾಜಿಕ ಬಳಕೆದಾರನ ಹಕ್ಕುಗಳನ್ನು ವಿವರಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಬಲೀಕರಣಗೊಳಿಸುವಲ್ಲಿ, ಸೃಜನಶೀಲತೆಯನ್ನು ಬೆಳೆಸುವಲ್ಲಿ, ಸಕಾರಾತ್ಮಕ ಮತ್ತು ಪ್ರಗತಿಪರ ಡಿಜಿಟಲ್ ಪರಿಸರ ನಿರ್ಮಿಸುವಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಕೂ ಒತ್ತಿ ಹೇಳುತ್ತದೆ.
ಈ ಬಗ್ಗೆ @KooPolicy ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದ್ದು, ವೇದಿಕೆ ಬಳಕೆದಾರರಿಗೆ ಅವರ ಗೌಪ್ಯತೆ ಮತ್ತು ರಕ್ಷಣೆಯ ಹಕ್ಕನ್ನು ನೆನಪಿಸುತ್ತದೆ - https://www.kooapp.com/koo/KooPolicy/b87c2eba-f99d-443f-b517-79532b5e781b
Koo ಆ್ಯಪ್ನ ಪಾರದರ್ಶಕ ಗೌಪ್ಯತೆ ನೀತಿಯು ಪ್ಲಾಟ್‌ಫಾರ್ಮ್‌ನಲ್ಲಿ ಸಂವಹನ ನಡೆಸುವಾಗ ಬಳಕೆದಾರರಿಗೆ ಅರ್ಹವಾಗಿರುವ ಹಕ್ಕುಗಳ ಕುರಿತು ವಿವರಗಳನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರ ಬಗ್ಗೆ ಪ್ಲಾಟ್‌ಫಾರ್ಮ್ ಹೊಂದಿರುವ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಸಹ ಒಳಗೊಂಡಿವೆ. ಅಸಮರ್ಪಕ ಅಥವಾ ಅನಗತ್ಯವಾದಾಗ ವೈಯಕ್ತಿಕ ಮಾಹಿತಿಯನ್ನು ರದ್ದುಗೊಳಿಸುವ ಅಥವಾ ಅಳಿಸುವ ಹಕ್ಕನ್ನು ಒಳಗೊಂಡಿರುತ್ತದೆ.
ಏತನ್ಮಧ್ಯೆ ಆನ್‌ಲೈನ್‌ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ಭದ್ರತೆ ಹೆಚ್ಚಿಸಲು, ಕೂ ರಚನಾತ್ಮಕವಾದ ಸಮುದಾಯ ಮಾರ್ಗಸೂಚಿಗಳು ಮತ್ತು ವಿಷಯ ಮಾಡರೇಶನ್ ಗೈಡ್ ಕೂಡ ಹೊಂದಿದೆ. ಬಳಕೆದಾರರಿಗೆ ಮತ್ತು ಮೊದಲ ಬಾರಿ ಸಾಮಾಜಿಕ ಮಾಧ್ಯಮ ಬಳಸುವವರಿಗೆ ಆನ್‌ಲೈನ್‌ನಲ್ಲಿ ಅನುಮತಿಸುವ ಅಥವಾ ನಿಷೇಧಕ್ಕೊಳಗಾಗುವ ವಿಷಯಗಳ ಕುರಿತು ಮಾರ್ಗದರ್ಶನ ನೀಡುವ ಮೂಲಕ ಆರೋಗ್ಯಕರ ವಿಷಯವನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಕುಂದುಕೊರತೆ ಪರಿಹಾರವು ಬಳಕೆದಾರರ ಹಕ್ಕುಗಳ ಮತ್ತೊಂದು ನಿರ್ಣಾಯಕ ಅಂಶವಾಗಿರುವುದರಿಂದ, ತ್ವರಿತವಾಗಿ ಕಾಳಜಿ ವಹಿಸುವ ಕುಂದುಕೊರತೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಅನುಸರಣೆ ಅಧಿಕಾರಿಯನ್ನು ಒಳಗೊಂಡ ದೃಢವಾದ ಪ್ರಕ್ರಿಯೆಯನ್ನು ಕೂ ಹೊಂದಿದೆ.
ಬಳಕೆದಾರರು ತಮ್ಮ ಸಮಸ್ಯೆಗಳಿಗಾಗಿ grievance.officer@kooapp.com ಅಥವಾ redressal@kooapp.com ಗೆ ಬರೆಯಬಹುದು, ವಿವಿಧ ವಿಷಯಗಳ ಕುರಿತು ವರದಿ ಮಾಡಲು ಮತ್ತು ಪರಿಹಾರಕ್ಕಾಗಿ ಸಂಪನ್ಮೂಲ ಕೇಂದ್ರದಲ್ಲಿನ ವರದಿ ಮತ್ತು ಪರಿಹಾರ ಅರ್ಜಿ ಕುರಿತ ಪೇಜ್ಗೆ ಭೇಟಿ ನೀಡಿ.
ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಸ್ವಯಂ-ಅಭಿವ್ಯಕ್ತಿಗೆ ಅತಿ ದೊಡ್ಡ ವೇದಿಕೆಯಾದ ಕೂ 2 ಕೋಟಿಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಮತ್ತು ಸೂಕ್ಷ್ಮಗ್ರಾಹಿಯಾಗಿಸಿ ಬಳಕೆದಾರರನ್ನು ರಕ್ಷಿಸಲು ಮತ್ತು ಸಂವೇದನಾಶೀಲಗೊಳಿಸಲು ನಿಯಮಿತವಾಗಿ ಉಪಕ್ರಮಗಳನ್ನು ಹೊರತರುತ್ತಿರುತ್ತದೆ.