ಸಕ್ಕರೆ-ಅಡುಗೆ ಎಣ್ಣೆ ಮಿತವಾಗಿ ಬಳಸಿ

ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಕರಪತ್ರ ಪ್ರದರ್ಶಿಸಲಾಯಿತು. ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಂ.ವೀರೇಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ವೈದ್ಯರಾದ ಶೇಖ್ ಸೈಫುಲ್ಲಾ, ಪ್ರಿಯಾಂಕಾ, ಭರತ್ ಪದ್ಮಶಾಲಿ, ಶ್ರೀನಿವಾಸ, ಹಾರಿಕಾ ಇತರರಿದ್ದರು.

Published on

ಕಂಪ್ಲಿ: ಸ್ವಸ್ಥ ನಾರಿಯಿಂದ ಸಶಕ್ತ ಪರಿವಾರ ರೂಪಿಸಬಹುದು ಆದ್ದರಿಂದ ನಾರಿಯರು ಸ್ವಾಸ್ಥೃ ಕಾಪಾಡಿಕೊಳ್ಳುವಲ್ಲಿ ನಿಗಾ ವಹಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಂ.ವೀರೇಶ ಹೇಳಿದರು.

ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ನಿಮಿತ್ತ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಹಾರದಲ್ಲಿ ಸಕ್ಕರೆ, ಅಡುಗೆ ಎಣ್ಣೆ ಮಿತವಾಗಿ ಬಳಸಬೇಕು. ಸ್ಥಳೀಯ ಮತ್ತು ಪ್ರಾದೇಶಿಕ ಆಹಾರ ಸೇವಿಸುವುದು, ಋತುಚಕ್ರದ ಸಮಯದಲ್ಲಿ ಸ್ವಚ್ಛತೆ, ಪೌಷ್ಟಿಕಾಂಶ ಕುರಿತು ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಮಾತನಾಡಿ, ಸ್ವಸ್ಥ ನಾರಿ ಅಭಿಯಾನದ ಯೋಜನೆಗಳನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಮನೋವೈದ್ಯ ಶೇಖ್ ಸೈಫುಲ್ಲಾ, ಚರ್ಮ ತಜ್ಞೆ ಡಾ.ಪ್ರಿಯಾಂಕಾ, ನೇತ್ರ ತಜ್ಞೆ ಡಾ.ತನುಜಾ, ಇಎನ್‌ಟಿ ತಜ್ಞೆ ಡಾ.ರಮಾದೇವಿ, ವೈದ್ಯರಾದ ಭರತ್ ಪದ್ಮಶಾಲಿ, ಶ್ರೀನಿವಾಸ, ಮಲ್ಲೇಶಪ್ಪ, ಹಾರಿಕಾ, ನೇತ್ರಾಧಿಕಾರಿ ಸುಂಕಪ್ಪ, ಪ್ರಮುಖ ಪ್ರಕಾಶಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net