

ದೊಡ್ಡಬಳ್ಳಾಪುರ : ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕವಾಗಿದೆ. ಇದರ ಬಗ್ಗೆ ರ್ನಿಲಕ್ಷ$್ಯ ತೋರದಂತೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು. ಪಂಡಿತ್ ದಿನ್ ದಯಾಳ ಉಪಾಧ್ಯಾಯ ಮತ್ತು ಪ್ರಧಾನಿ ನರೆಂದ್ರ ಮೋದಿ ರವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಮಂಡಲ ಮತ್ತು ರಾಜ್ಯ ವೈದ್ಯಕಿಯ ಪ್ರಕೋಷ್ಟದ ವತಿಯಿಂದ ಡಿಪಿವಿ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಕ್ಯಾನ್ಸರ್, ದಂತ, ಕಣ್ಣು ಮತ್ತು ಹೃದಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ರೀತಿಯ ರೋಗಗಳನ್ನು ಮನುಷ್ಯರನ್ನು ಭಾದಿಸುತ್ತಿದೆ.
ನಮ್ಮ ಜೀವನ ಶೈಲಿ, ಆಹಾರ ಪದ್ದತಿಗಳು ನಮ್ಮ ಆರೋಗ್ಯದ ಬಗ್ಗೆ ಪರಿಣಾಮ ಬೀರುತ್ತದೆ. ಎಲ್ಲ ರೋಗಗಳನ್ನು ಆರಂಭಿಕ ಹಂತದಲ್ಲಿ ಗುರುತಿಸುವುದರಿಂದ ಅದನ್ನು ಸಂಪೂರ್ಣವಾಗಿ ಗುಣಮುಖರಾಗಬಹುದು. ಅದರಲ್ಲೂ ಕ್ಯಾನ್ಸರ್ ನಂತಹ ರೋಗದ ಬಗ್ಗೆ ಸಾಕಷ್ಟು ಎಚ್ಚರವಹಿಸಬೇಕು. ನಿರಂತರ ತಪಾಸಣೆ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳ ಬಗ್ಗೆ ಗುರುತಿಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಪ್ರತಿದಿನ ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯಕರವಾದ ಆಹಾರವನ್ನು ಸೇವಿಸುವುದರಿಂದ ಕೂಡ ಆರೋಗ್ಯ ಕಾಳಜಿ ಮಾಡಿದಂತಾಗುತ್ತಿದೆ. ಈ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯದ ಅನುಕೂಲ ಪಡೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಎಲ್ಲರೂ ಎಚ್ಚರವಹಿಸುವಂತೆ ಸಲಹೆ ನೀಡಿದರು. ಈ ಆರೋಗ್ಯ ಶಿಬಿರದಲ್ಲಿ ಅಭಿಷೇಕ್ ನೇತ್ರಧಾಮ, ಆಕಾಶ್ ಮೆಡಿಕಲ್ ಕಾಲೇಜು ,ಶಂಕರ್ ಕ್ಯಾನ್ಸರ್ ಸಂಸ್ಥೆ ಶ್ರೀ ಕೃಷ್ಣದೇವರಾಯ ದಂತ ವಿಜ್ಞಾನ ಕಾಲೇಜು ಮತ್ತು ಆಸ್ಟರ್ ಹಾಸ್ಪಿಟಲ್ಗಳ ತಂಡವು ಭಾಗವಹಿಸಿ ತಪಾಸಣೆ ನಡೆಸಿದರು.