ವಿಮಾನದ ತುರ್ತು ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ; ತಡೆಯಲು ಬಂದ ಸಿಬ್ಬಂದಿಗೆ ಚಾಕುವಿನಿಂದ ಹಲ್ಲೆ

Plane
Published on

ಲಾಸ್ ಏಂಜಲೀಸ್: ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ವಿಮಾನದ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪೊಲೀಸರ ಅತಿಥಿಯಾಗಿದ್ದಾನೆ.

ಟೊರೆಸ್ (33) ಬಂಧಿತ. ಈತನನ್ನು ಪೊಲೀಸರು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಮಾರ್ಚ್​ 9 ರವರೆಗೆ ಕಸ್ಟಡಿಯಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

ಯುನೈಟೆಡ್​ ಏರ್​ಲೈನ್ಸ್​ ವಿಮಾನವು ಲಾಸ್​ ಏಂಜಲೀಸ್​ನಿಂದ ಬೋಸ್ಟನ್​ಗೆ ತೆರಳುತ್ತಿತ್ತು. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಗಳ ಮೊದಲು, ವಿಮಾನ ಸಿಬ್ಬಂದಿಗೆ ಎಚ್ಚರಿಕೆಯ ಶಬ್ದ ಕೇಳಿಸಿದೆ, ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಂದೇಶ ಬಂದಿದೆ.

ಪ್ರಯಾಣಿಕ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಗಗನಸಖಿ ತಡೆಯಲು ಮುಂದೆ ಬಂದಿದ್ದಾಳೆ. ಈ ವೇಳೆ ಆಕೆಯ ಕತ್ತಿಗೆ ಮೂರು ಬಾರಿ ಇರಿದು ಹಲ್ಲೆ ನಡೆಸಿದ್ದಾನೆ. ಬಳಿಕ ವಿಮಾನವು ಬೋಸ್ಟನ್‌ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net