More

    ವಿದ್ಯುತ್ ತಂತಿ ತಗುಲಿ ಪ್ರಾಣ ಬಿಟ್ಟ ಮೂರು ಆನೆಗಳು

    ತಮಿಳುನಾಡು: ಫಸಲು ಕೊಯ್ಲಾಗುವವರೆಗೆ ರೈತರಿಗೆ ಸಂಕಷ್ಟಗಳು ಒಂದೆರಡಲ್ಲ. ಅತಿವೃಷ್ಟಿ ಅನಾವೃಷ್ಟಿಯಂತಹ ದೊಡ್ಡ ಸಮಸ್ಯೆಗಳ ಜೊತೆಗೆ ಚಿಕ್ಕಪುಟ್ಟ ತೊಂದರೆಗಳು ಸಾಕಷ್ಟು. ಇವೆಲ್ಲದರ ಮಧ್ಯೆ ವನ್ಯಪ್ರಾಣಿಗಳ ಕಾಟ ಬೇರೆ. ಕೆಲವೊಮ್ಮೆ ಬೆಳೆದ ಬೆಳೆಗಳು ಕೈಗೆ ಬಂದರೂ ಬಾಯಿಗೆ ಇಲ್ಲ ಎಂಬಂತಾಗುತ್ತದೆ. ಹೀಗೆ ವನ್ಯಪ್ರಾಣಿಗಳ ಕಾಟಕ್ಕೆ ರೈತ ಮಾಡಿರುವ ಕೆಲಸದಿಂದಾಗಿ ಮೂರು ಆನೆಗಳು ಸಾವನ್ನಪ್ಪಿವೆ.

    ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸುವ ಸಲುವಾಗಿ ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಹಾಕಿದ್ದನು. ಇದನ್ನು ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಮೂರು ಆನೆಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇದನ್ನೂ ಓದಿ: ಹಿಂದೂ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ಜೋಡಿ

    ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾಳಿ ಕೌಂಡರ್ ಕೊಟ್ಟೈ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್​​ ಬೇಲಿ ದಾಟುತ್ತಿದ್ದ ಮೂರು ಆನೆಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿವೆ.

    ಇದನ್ನೂ ಓದಿ: ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ಧನ ರೆಡ್ಡಿ

    ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದ ಕಾರಣ ರೈತ ತನ್ನ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕುತ್ತಿದ್ದಾರೆ. ಇದು ಸ್ಪರ್ಶವಾದ ಕಾರಣ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವೃದ್ಧಾಶ್ರಮದಲ್ಲಿದ್ದುಕೊಂಡೇ 1.5 ಕೋಟಿ ರೂ. ಮೊತ್ತದ ಆಸ್ತಿಯನ್ನು ಸರ್ಕಾರಕ್ಕೆ ಬರೆದ ವೃದ್ಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts