ಅಕ್ರಮವಾಗಿ ನೆಲೆಸಿದ್ದ 2,790 ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ; ಕೇಂದ್ರ ಸರ್ಕಾರ| Illegally staying

ವಿಜಯವಾಣಿ - 2025-10-31T080708.672
Published on

ನವದೆಹಲಿ: ಈ ವರ್ಷದ ಜನವರಿಯಿಂದ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದ(Illegally staying) 2,790 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದ್ದು, ಅವರೆಲ್ಲರೂ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ(ಅ. 30) ಮಾಹಿತಿ ನೀಡಿದೆ.

ಈ ಕುರಿತು ಮಾತನಾಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್, ಈ ವರ್ಷದ ಜನವರಿಯಿಂದ ಅಮೆರಿಕದಿಂದ ಸುಮಾರು 2,790 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ.,ಅವರು ಅಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ನಾವು ಅವರ ರುಜುವಾತುಗಳನ್ನು, ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಿದ್ದೇವೆ. ಅವರೆಲ್ಲಾ ಹಿಂತಿರುಗಿದ್ದಾರೆ. ಇದು ಅ. 29ರವರೆಗಿನ ಸಂಖ್ಯೆ ಎಂದು ಹೇಳಿದ್ದಾರೆ.

ಇನ್ನೂ ಈ ವರ್ಷ ಯುಕೆ ಕಡೆಯಿಂದ ಸುಮಾರು 100 ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net