

ವಾಷಿಂಗ್ಟನ್: ಅಮೆರಿಕಕ್ಕೆ ವಿಶೇಷ ಅಥವಾ ಇನ್ನಾವುದೇ ವಿಮಾನಗಳನ್ನು ಚಲಾಯಿಸಿಕೊಂಡು ಬರಬೇಡಿ ಎಂದು ಪಾಕಿಸ್ತಾನದ ಪೈಲಟ್ಗಳಿಗೆ ನಿಷೇಧ ವಿಧಿಸಲಾಗಿದೆ.
ಪಾಕಿಸ್ತಾನದ ಪೈಲಟ್ಗಳಲ್ಲಿ ಶೇ.30ಕ್ಕೂ ಹೆಚ್ಚು ಜನರು ನಕಲಿ ಪ್ರಮಾಣಪತ್ರಗಳ ಆಧಾರದಲ್ಲಿ ಪೈಲಟ್ಗಳಾಗಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅಮೆರಿಕ ಈ ನಿಷೇಧ ಜಾರಿಗೆ ತಂದಿದೆ.
ಅಮೆರಿಕದ ವಿಮಾನ ಯಾನ ಸಚಿವಾಲಯ ಪಾಖ್ ಪೈಲಟ್ಗಳ ಪ್ರಮಾಣ ಪತ್ರಗಳ ಬಗ್ಗೆ ಶಂಕೆ ವ್ಯಕ್ತಪಡಿಸಿರುವುದರಿಂದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನಗಳು ಅಮೆರಿಕಕ್ಕೆ ಸಂಚಾರ ನಡೆಸಲು ಇದ್ದ ಅನುಮತಿಯನ್ನು ಅಮೆರಿಕ ಸಾರಿಗೆ ಇಲಾಖೆ ಹಿಂಪಡೆದಿದೆ.
ಇದಲ್ಲದೇ, ನಕಲಿ ವಿದ್ಯಾರ್ಹತೆಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದು ಬಯಲಾದ ಬಳಿಕ ಕಳೆದ ತಿಂಗಳು ಪಾಕಿಸ್ತಾನ ಶೇ.30ಕ್ಕೂ ಅಧಿಕ ಪೈಲಟ್ಗಳ ಸೇವೆಯನ್ನು ರದ್ದುಗೊಳಿಸಿತ್ತು.
ಕರಾಚಿಯಲ್ಲಿ ವಿಮಾನ ದುರಂತಕ್ಕೆ ಪೈಲಟ್ಗಳ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಪೈಲಟ್ಗಳಲ್ಲಿ ಹಲವರು ವಿದ್ಯಾರ್ಹತೆ ಹಾಗೂ ವಿವಿಧ ಪ್ರಮಾಣಪತ್ರಗಳನ್ನು ನಕಲಿಯಾಗಿ ಸಲ್ಲಿಸಿದ್ದಾರೆ ಎಂದು ಎಂಬುದು ತಿಳಿದುಬಂದಿತ್ತು.