190 ಕೋಟಿ ರೂ. ಮೌಲ್ಯದ ಮನೆಯಲ್ಲಿ ನಟಿ ಊರ್ವಶಿ ರೌಟೇಲಾ ವಾಸ

urvashi
Published on

ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಳೆದ ಏಳೆಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಅವರು ಕೋಟಿ ಬೆಲೆ ಬಾಳುವ ಹೊಸ ಮನೆಗೆ ಶಿಫ್ಟ್​​​ ಆಗಿದ್ದಾರೆ ಎನ್ನಲಾಗಿದೆ.

ನಟಿ ಊರ್ವಶಿ ರೌಟೇಲಾ 190 ಕೋಟಿ ಮೌಲ್ಯದ ಮುಂಬೈ ಮನೆಯಲ್ಲಿ ತಂಗಿದ್ದಾರೆ. ಮುಂಬೈನಲ್ಲಿರುವ ನಟಿ ಮನೆ ಐಷಾರಾಮಿಯಾಗಿದೆ. ದಿವಂಗತ, ನಿರ್ಮಾಪಕ ಯಶ್ ಚೋಪ್ರಾ ಅವರ ಮನೆಯ ಪಕ್ಕದಲ್ಲಿರುವ ಬಂಗಲೆಗೆ ನಟಿ ಸ್ಥಳಾಂತರಗೊಂಡಿದ್ದಾರೆ.

urvashi

ನಾಲ್ಕು ಅಂತಸ್ತಿನ ಬಂಗಲೆಯು ಅದ್ದೂರಿ ಉದ್ಯಾನ, ಜಿಮ್ ಮತ್ತು ದೊಡ್ಡ ಬಾಲಕ್ಕನಿ ಒಳಗೊಂಡಿದೆ. ಊರ್ವಶಿ ರೌಟೇಲಾ ಅವರ ಈ ಬಂಗಲೆಯ ಬೆಲೆ 190 ಕೋಟಿ ರೂ. ಬೆಲೆ ಬಾಳುತ್ತದೆ. ಈ ಮನೆಯ ಒಳ ವಿನ್ಯಾಸ ತುಂಬಾ ವಿಶೇಷವಾಗಿದೆ ಎನ್ನಲಾಗಿದೆ.

ವರದಿಯ ಪ್ರಕಾರ, ಊರ್ವಶಿ ರೌಟೇಲಾ ಎರಡು ತಿಂಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಈ ಸುದ್ದಿಯನ್ನು ಹೇಳಿಕೊಂಡಿಲ್ಲ. ರೌಟೇಲಾ ಈ ಮನೆಗೆ ಬಾಡಿಗೆಗೆ ನೀಡುತ್ತಿದ್ದಾರಾ ಅಥವಾ ಅದನ್ನು ಖರೀದಿಸಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಈ ಮನೆಯಲ್ಲಿ ತೆಗೆದ ಕೆಲವು ಫೋಟೋಗಳು ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

urvashi

ಊರ್ವಶಿ ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಭರ್ಜರಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿ ರೂ.ಗೂ ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net