More

    ಈ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದೆ ಡ್ರೆಸ್ ಕೋಡ್

    ಉತ್ತರಪ್ರದೇಶ: ಆಂಜನೇಯ ದೇವಸ್ಥಾನವೊಂದರಲ್ಲಿ ಭಕ್ತರಿಗೆ ‘ಡ್ರೆಸ್ ಕೋಡ್’ ಅನ್ನು ವಿಧಿಸಲಾಗಿದೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

    ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಆಂಜನೇಯ ದೇವಸ್ಥಾನದ ಪ್ರವೇಶದ್ವಾರದಲ್ಲಿ ಹಾಕಲಾದ ಪೋಸ್ಟರ್​​ನಲ್ಲಿ ನಿಗದಿತ ಡ್ರೆಸ್ ಕೋಡ್ ಅನ್ನು ಅನುಸರಿಸುವಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.

    “ಚಿಕ್ಕ ಬಟ್ಟೆ, ಹಾಫ್ ಪ್ಯಾಂಟ್, ಬರ್ಮುಡಾ, ಮಿನಿಸ್ಕರ್ಟ್, ನೈಟ್‌ವೇರ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿಗಳಿಗೆ ದೇವಾಲಯದ ಆವರಣಕ್ಕೆ ಪ್ರವೇಶವನ್ನು ನಿರಾಕರಿಸಲಾಗುವುದು” ಎಂದು ನೋಟಿಸ್ ಹೇಳುತ್ತದೆ.

    ಇದನ್ನೂ ಓದಿ: ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ!

    ದೇವಾಲಯದ ಮುಖ್ಯ ಅರ್ಚಕ ಮತ್ತು ಸಮಿತಿಯ ಮುಖ್ಯಸ್ಥ ಸಲೀಲ್ ದ್ವಿವೇದಿ ಮಾತನಾಡಿ, “ಈ ನಿರ್ಧಾರವು ದೇವಾಲಯಗಳಲ್ಲಿ ವರ್ಷಗಳಿಂದ ಅನುಸರಿಸುತ್ತಿರುವ ದೀರ್ಘಕಾಲದ ಸಂಪ್ರದಾಯಗಳೊಂದಿಗೆ ಹೊಂದಿಕೆಯಾಗುತ್ತದೆ” ಎಂದು ಹೇಳಿದರು.

    ಅಲಿಘರ್, ಮಥುರಾ ಮತ್ತು ಮುಜಾಫರ್‌ನಗರದ ದೇವಾಲಯಗಳಲ್ಲಿ ಯಾತ್ರಿಕರ ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.

    ಹಠ ಮಾಡುವ ಮಕ್ಕಳು ಬೇಡಾ! ಉಸಿರುಗಟ್ಟಿಸಿ ಅವಳಿ ಮಕ್ಕಳನ್ನು ಕೊಂದ ಪಾಪಿ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts