

ಬಾಲಿವುಡ್ನಲ್ಲಿ ಕರೊನಾದಿಂದಾಗಿ ಸಾಕಷ್ಟು ಸೆಲೆಬ್ರಿಟಿಗಳ ಮದುವೆ ಮುಂದಕ್ಕೆ ಹೋಗಿದೆ. ಸದ್ಯಕ್ಕೆ ಮದುವೆ ಸಹವಾಸವೇ ಸಾಕು, ಪರಿಸ್ಥಿತಿ ತಿಳಿಯಾದ ಮೇಲೆ ಮದುವೆಯಾದರಾಯಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಿರುವಾಗಲೇ ಬಹುಭಾಷಾ ನಟಿ ಊರ್ವಶಿ ರೌಟೇಲಾ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಅವರ ಆ ಅದ್ದೂರಿ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಪೊಲೀಸರು ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದ ಕಂಗನಾ
ಹೌದು, ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಊರ್ವಶಿ, ಅದಾದ ಬಳಿಕ ಹಲವು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡರು. ಇತ್ತೀಚಿನ ಕೆಲ ವರ್ಷಗಳಿಂದ ಬಾಲಿವುಡ್ನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗಿರುವಾಗಲೇ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಕಿರುತೆರೆ ನಟ ಗೌತಮ್ ಗುಲಾಟಿ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದಾರೆ. ಆದರೆ, ಆ ಮದುವೆ ರಿಯಲ್ ಅಲ್ಲ. ಬದಲಿಗೆ ರೀಲ್!
ಅಂದರೆ, ನಟ ಗೌತಮ್ ಇತ್ತೀಚೆಗಷ್ಟೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಊರ್ವಶಿ ಜತೆಗಿನ ಫೋಟೋ ಹಾಕಿಕೊಂಡು, ‘ಮದುವೆಯ ಶುಭಾಶಯಗಳೆಂದು ಹರಸುವುದಿಲ್ಲವೇ’ ಎಂದು ಕ್ಯಾಪ್ಷನ್ ನೀಡಿದ್ದರು. ಈ ಫೋಟೋಗಳನ್ನು ನೋಡಿ ಊರ್ವಶಿ ಮದುವೆಯಾದ್ರಾ ಎಂದೇ ತಿಳಿದುಕೊಂಡಿದ್ದರು ಅಭಿಮಾನಿಗಳು. ಅದಾದ ಬಳಿಕ ಅದು ಸಿನಿಮಾವೊಂದರ ಸನ್ನಿವೇಶದ ಫೋಟೋ ಎಂಬುದು ಗೊತ್ತಾಗಿದೆ.
ಗೌತಮ್ ಗುಲಾಟಿ ಮತ್ತು ಊರ್ವಶಿ ‘ವರ್ಜಿನ್ ಭಾನುಪ್ರಿಯ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಜುಲೈ 16ರಂದು ಓಟಿಟಿ ವೇದಿಕೆಯಲ್ಲಿ ಬಿಡುಡಗೆಯಾಗಲಿದೆ. ಈ ಚಿತ್ರದ ಮದುವೆಯ ದೃಶ್ಯವನ್ನು ಗೌತಮ್ ಪೋಸ್ಟ್ ಮಾಡಿ, ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. (ಏಜೆನ್ಸೀಸ್)