More

    ನೆಪೋಮೀಟರ್​ ಮಾಡಿದ್ದು ಹಣ ಮಾಡೋ ಉದ್ದೇಶದಿಂದಲ್ಲ …

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜಪಕ್ಷಪಾತ) ಕುರಿತಾದ ಚರ್ಚೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಸ್ವಜನಪಕ್ಷಪಾತದಿಂದಲೇ ಸುಶಾಂತ್ ಅವರಿಗೆ ಹಲವು ಚಿತ್ರಗಳು ಕೈತಪ್ಪಿದವು ಮತ್ತು ಅದೇ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾದರು ಎಂಬ ಮಾತುಗಳು ಕೇಳಿ ಬಂದಿವೆ.

    ಇದನ್ನೂ ಓದಿ: ಪೊಲೀಸರು ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದ ಕಂಗನಾ

    ಅದೇ ಕಾರಣಕ್ಕೆ, ಇತ್ತೀಚೆಗೆ ಸುಶಾಂತ್​ ಕುಟುಂಬದವರು ನೆಪೋಮೀಟರ್​ ಎಂಬ ಆಪ್​ವೊಂದನ್ನು ಶುರು ಮಾಡಿದ್ದರು. ಒಂದು ಚಿತ್ರದಲ್ಲಿ ಸ್ವಜನಪಕ್ಷಪಾತ ಎಷ್ಟಿರುತ್ತದೆ ಎಂದು ಲೆಕ್ಕ ಹಾಕುವುದಕ್ಕೆ ಈ ಆಪ್​ ಉಪಯೋಗಕ್ಕೆ ಬರಲಿದೆ ಎಂದು ಹೇಳಿದ್ದರು.

    ನೆಪೋಮೀಟರ್​ ಶುರು ಮಾಡಿರುವುದು ಹಣ ಮಾಡುವ ಉದ್ದೇಶಕ್ಕಲ್ಲ ಎಂದು ಈಗ ಸುಶಾಂತ್​ ಅವರ ಬಾವ ವಿಶಾಲ್​ ಕೀರ್ತಿ ಹೇಳಿಕೊಂಡಿದ್ದಾರೆ. ‘ಸುಶಾಂತ್​ ಸಾವಿನಿಂದ ನಾವು ಇನ್ನೂ ಹೊರಗೆ ಬಂದಿಲ್ಲ. ಈ ನೆಪೋಮೀಟರ್​ನಿಂದ ನಮಗೆ ಯಾರನ್ನೂ ಹೆದರಿಸುವ ಅಥವಾ ಹಣ ಮಾಡುವ ಉದ್ದೇಶವಿಲ್ಲ. ಈ ಆಪ್​ನಿಂದ ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ವಿಶಾಲ್​ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ನೆಪೋಮೀಟರ್​ ಶುರುವಾದ ನಂತರ, ಮಹೇಶ್​ ಭಟ್​ ನಿರ್ದೇಶನದ ‘ಸಡಕ್​ 2’ ಚಿತ್ರದಲ್ಲಿ ನೆಪೋಟಿಸಂ ಎಷ್ಟಿದೆ ಎಂದು ಕೇಳಲಾಗಿತ್ತು. ಈ ಚಿತ್ರದ ಐದು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಜನರು ಯಾರ್ಯಾರ ಸಂಬಂಧಿ ಮತ್ತು ಸ್ವಜನಪಕ್ಷಪಾತವೆಂಬುದು ಇಲ್ಲಿ ಎಷ್ಟು ವರ್ಕೌಟ್​ ಆಗಿದೆ ಎಂದು ಅಳೆದು-ತೂಗಿ ಜನ ಮತ ಹಾಕಿದ್ದರು. ಅದರ ಪ್ರಕಾರ, ‘ಸಡಕ್​ 2’ ಚಿತ್ರದಲ್ಲಿ ಶೇ 98ರಷ್ಟು ಸ್ವಜನಪಕ್ಷಪಾತವಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ಸರೋಜಾ ಖಾನ್​ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ

    ಹೀಗೆ ಉತ್ತರ ಬಂದ ಹಿನ್ನೆಲೆಯಲ್ಲೇ, ನೆಪೋಮೀಟರ್​ ಕುರಿತು ಚರ್ಚೆ ಬಾಲಿವುಡ್​ನಲ್ಲಾಗಿತ್ತು. ಅಂಥದ್ದೊಂದು ಆಪ್​ ಮಾಡುವ ಉದ್ದೇಶವೇನಿತ್ತು, ಅದರ ಹಿಂದೆ ದುಡ್ಡು ಮಾಡುವುದು ನಿಜವಾದ ಉದ್ದೇಶವಾ ಎಂಬ ಪ್ರಶ್ನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಶಾಲ್​ ಕೀರ್ತಿ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.

    ‘ಗ್ರಾಮಾಯಣ’ ಬಿಡುಗಡೆಗೂ ಮುನ್ನವೇ ನಿರ್ಮಾಪಕ ಮೂರ್ತಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts