

ನವದೆಹಲಿ: ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಮ್ ರಂಗ್’ ಹಾಡಿನ ಬಗ್ಗೆ ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಉಡುಗೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು.
ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ, ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸಿನಿಮಾವನ್ನು ಹಿಂದೂ ಪರ ಸಂಘಟನೆಗಳು ಬಾಯ್ಕಾಟ್ ಮಾಡಬೇಕು ಎಂದು ಅಭಿಯಾನವನ್ನೂ ಆರಂಭಿಸಿದ್ದವು. ಕೇಸರಿ ಬಣ್ಣ ಹಿಂದುಗಳದ್ದು. ಅಶ್ಲೀಲ, ಅಸಭ್ಯ ಬಟ್ಟೆ ಹಾಕಿದ ಹಾಡಿನಲ್ಲಿ ವ್ಯವಸ್ಥಿತವಾಗಿ ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.
ಇದೀಗ ಚಿತ್ರ ವಿಚಿತ್ರವಾಗಿ ಬಟ್ಟೆ ಧರಿಸಿ, ಸದಾ ಸುದ್ದಿಯಾಗುತ್ತಿರುವ ಉರ್ಫಿ ಜಾವೇದ್, ಕೇಸರಿ ಬಣ್ಣದ ತುಂಡುಡುಗೆ ಧರಿಸಿಕೊಂಡಿದ್ದಾರೆ. ಬೇಷರಮ್ ರಂಗ್ ಹಾಡಿಗೆ ಕೇಸರಿ ಬಣ್ಣದ ತುಂಡುಡುಗೆ ಧರಿಸಿ ರೀಲ್ಸ್ ಮಾಡಿ, ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ವಿವಾದ ಮಾಡಲೆಂದೇ ಉರ್ಫಿ, ಈ ರೀತಿ ಬೇಷರಮ್ ಹಾಡಿಗೆ ತುಂಡುಡುಗೆಯಲ್ಲಿ ರೀಲ್ಸ್ ಮಾಡಿಕೊಂಡಿದ್ದಾಳೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ದೀಪಿಕಾಳನ್ನು ಟೀಕಿಸಿದ ಮಾದರಿಯಲ್ಲೇ, ಉರ್ಫಿ ಜಾವೇದ್ಳನ್ನು ಟೀಕಿಸುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಉರ್ಫಿ ಜಾವೇದ್ ಅಪ್ಲೋಡ್ ಮಾಡಿರುವಂತಹ ಹೊಸ ರೀಲ್ಸ್ ಇದೀಗ ಯಾವ ಸ್ವರೂಪದ ಟೀಕೆಯನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.