

ನವದೆಹಲಿ: ತನ್ನ ಚಿತ್ರ ವಿಚಿತ್ರ ಬಟ್ಟೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ವಿರುದ್ಧ ಇತ್ತೀಚೆಗೆ ಮುಂಬೈನಲ್ಲಿ ದೂರು ದಾಖಲಾಗಿತ್ತು. ಇದಲ್ಲದೆ ಅರೆಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿದ್ದಕ್ಕೆ ದುಬೈನಲ್ಲಿ ಪೊಲೀಸರಿಂದ ಉರ್ಫಿ ಬಂಧನವಾಗಿತ್ತು. ಆದರೆ ಪ್ರಕರಣ ದಾಖಲಿಸಿಕೊಳ್ಳದ ದುಬೈ ಪೊಲೀಸರು ಬದ್ಧಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದರು.
ಇಷ್ಟಾದರೂ ಸುಮ್ಮನಾದಗ ಉರ್ಫಿ ಜಾವೇದ್ ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದ್ದಾಳೆ. ತುಂಡುಡುಗೆ ತೊಟ್ಟು ಖಾಸಗಿ ಅಂಗಾಂಗ ಕಾಣಿಸುವಂತೆ ವಿಡಿಯೋ ಮಾಡಿ ಅದನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹರಿಬಿಡುತ್ತಿದ್ದಾಳೆ. ಇದಕ್ಕೆ ತಕ್ಕ ಶಾಸ್ತಿ ಮಾಡಲೆಂದು ಬಿಜೆಪಿ ಸದಸ್ಯೆ ಚಿತ್ರಾ ವಾಘ್ ಎಂಬುವವರು ಉರ್ಫಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ ಆಗ್ರಹಿಸಿದ್ದರು.
ಇದೀಗ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಉರ್ಫಿ ಕೋಪಗೊಂಡಿದ್ದಾಳೆ. ದೂರು ನೀಡಿದವರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ನನ್ನನ್ನು ಜೈಲಿಗೆ ಕಳುಹಿಸುವಂತಹ ಯಾವುದೇ ಕಾಯ್ದೆ ಇದುವರೆಗೆ ರೂಪುಗೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ, ಅಶ್ಲೀಲತೆ ಎಂಬುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದುವರೆಗೆ ನಾನು ಅಶ್ಲೀಲವಾಗಿರುವಂತಹ ಯಾವುದೇ ಬಟ್ಟೆಯನ್ನು ಧರಿಸಿಲ್ಲ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳದವರು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಉರ್ಫಿ ಜಾವೇದ್ ಕಿಡಿಕಾರಿದ್ದಾಳೆ. (ಏಜೆನ್ಸೀಸ್)