ದಿಂಬಿನ ಡ್ರೆಸ್​​ ತೊಟ್ಟು ಬಂದ ಉರ್ಫಿ; ದಿನಕ್ಕೊಂದು ವೇಷ ನಿಂದು, ಹಾಸಿಗೆ ಎಲ್ಲಿ? ಎಂದ್ರು ನೆಟ್ಟಿಗರು

urfi
Published on

ಮುಂಬೈ: ಸೋಶಿಯಲ್​ ಮೀಡಿಯಾ ಸ್ಟಾರ್​ ಉರ್ಫಿ ಜಾವೇದ್ ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್. ಉರ್ಫಿ ಈ ಬಾರಿಯ ವೇಷ ಸಖತ್​ ವೈರಲ್​​ ಆಗಿದೆ.

ಉರ್ಫಿ ಜಾವೇದ್ ಅವರು ನೀಲಿ ಬಣ್ಣದ ಡ್ರೆಸ್ ಧರಿಸಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ ಈ ಉಡುಪನ್ನು ದಿಂಬಿನೊಂದಿಗೆ ತೊಟ್ಟಿದ್ದಾಳೆ. ಇದರಿಂದ ಹಲವರು ಅಚ್ಚರಿಗೊಂಡಿದ್ದಾರೆ.

ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಆದರೆ, ಈಗ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿ ಹೇಳಿದರು: “ಇಂತಹ ಸೋಮಾರಿಗಳಿಗೆ ಇದು ಪರಿಪೂರ್ಣ ಉಡುಗೆ. ಇನ್ನೊಬ್ಬರು ತಮಾಷೆಯಾಗಿ ಹೇಳಿದರು, "ಉರ್ಫಿ  ತನ್ನದೇ ಆದ ಚೀಲ ಮತ್ತು ಹಾಸಿಗೆಯನ್ನು ಹೊತ್ತಿದ್ದಾಳೆ."  ಎಂದು ಹೇಳಿದರು.

ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ನಟಿಯ ಸ್ಟೈಲ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಲಕ್ಷಣ ಡ್ರೆಸಿಂಗ್ ಸೆನ್ಸೇ ಆಕೆಗೆ ಫಾಲೋವರ್‌ಗಳನ್ನು ತಂದುಕೊಟ್ಟಿದೆ. ಹಾಕುವ ಬಹುತೇಕ ಬಟ್ಟೆಗಳಿಗೆ ಟ್ರೋಲ್ ಆದರೂ, ನಗಿಸಿಕೊಂಡರೂ, ಉಗಿಸಿಕೊಂಡರೂ ಕ್ಯಾರೇ ಎನ್ನದೆ ಮರುದಿನವೇ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಾಳೆ ಉರ್ಫಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net