ಯುಪಿಎಸ್​ಸಿಯಿಂದ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

udyoga-upsc
Published on

ಕೇಂದ್ರ ಲೋಕ ಸೇವಾ ಆಯೋಗ ವಿವಿಧ ವಿಭಾಗಗಳಿಗೆ ಡಿಸಿಐಒ (ಟೆಕ್ನಿಕಲ್​) ಸೇರಿದಂತೆ ಇತರ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಜ.12ರೊಳಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಸೈಂಟಿಸ್ಟ್​ ಬಿ (ಕೆಮಿಸ್ಟ್ರಿ)-2

ಡೆಪ್ಯುಟಿ ಸೆಂಟ್ರಲ್​ ಇಂಟೆಲಿಜೆನ್ಸ್​ ಆಫೀಸರ್​ (ಟೆಕ್ನಿಕಲ್​)- 4

ಜಾಯಿಂಟ್​ ಅಸಿಸ್ಟೆಂಟ್​ ಡೈರೆಕ್ಟರ್​-3

ಅಸಿಸ್ಟೆಂಟ್​ ಲೇಬರ್​ ಕಮಿಷನರ್-1

ವಿದ್ಯಾರ್ಹತೆ: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪದವಿ ವ್ಯಾಸಂಗ ಮಾಡಿರಬೇಕು. ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ: ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವೇತನ: ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಶ್ರೇಣಿ ಅನ್ವಯ 8ರಿಂದ 10ನೇ ಹಂತದವರೆಗೆ ಮಾಸಿಕ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್​ ಪುರುಷ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ಅನ್ವಯವಾಗಲಿದೆ. ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯ ಆಗುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು http://www.upsconline.nic.in. ವೆಬ್​ಸೈಟ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಿದರೆ ತಿರಸ್ಕರಿಸಲಾಗುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಮತ್ತು ನಿಗದಿತ ರೀತಿಯಲ್ಲಿ ಶುಲ್ಕ ಪಾವತಿಸಬೇಕು. ಆನ್​ಲೈನ್​ ಅರ್ಜಿ ಸಲ್ಲಿಸಿದ ನಂತರ ಅಂತಿಮವಾಗಿ ಅರ್ಜಿಯ ಪ್ರಿಂಟ್​ಔಟ್​ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳು ಆನ್​ಲೈನ್​ ಅರ್ಜಿಗಳ ಪ್ರಿಂಟ್​ಔಟ್​ಗಳನ್ನು ಅಥವಾ ಇತರ ಯಾವುದೇ ದಾಖಲೆಗಳನ್ನು ಅಂಚೆ ಮೂಲಕ ಅಥವಾ ಕೈಯಿಂದ ಆಯೋಗಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಸಂದರ್ಶನಕ್ಕೆ ಕರೆದಾಗ ಪ್ರಿಂಟ್​ಔಟ್​ ಮತ್ತು ಅಧಿಸೂಚನೆಯಲ್ಲಿ ನಮೂದಿಸಲಾದ ದಾಖಲೆ ತರಬೇಕು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿಗಳು, ಉಮೇದುವಾರಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶನ/ ಮಾಹಿತಿ/ಸ್ಪಷ್ಟೀಕರಣದ ಸಂದರ್ಭದಲ್ಲಿ ಅಭ್ಯರ್ಥಿಗಳು ಯುಪಿಎಸ್​ಸಿ ಕ್ಯಾಂಪಸ್​ನ ಗೇಟ್​ "ಸಿ'' ಬಳಿ ಇರುವ ಫೆಸಿಲಿಟೇಶನ್​ ಕೌಂಟರ್​ಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಸಂಖ್ಯೆ 011-23385271/ 011-23381125/ 011-230985 ಮೂಲಕ ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಕೊನೇ ದಿನ: 12.01.2023

ಅಧಿಸೂಚನೆಗೆ: https://bit.ly/3WYeDov

ಮಾಹಿತಿಗಾಗಿ: https://www.upsc.gov.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net