

ಭಯೋತ್ಪಾದನೆ ಜಗತ್ತಿನ ಶಾಂತಿ ಮತ್ತು ಭದ್ರತೆಗೆ ದೊಡ್ಡ ಕಂಟಕ ಎಂಬುದು ಅಮೆರಿಕಕ್ಕೆ ಅರ್ಥವಾಗಿದ್ದು 2001ರ ಸೆಪ್ಟೆಂಬರ್ 11ರಂದು ನ್ಯೂರ್ಯಾನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರವೇ. ತಡವಾಗಿ ಎಚ್ಚೆತ್ತುಕೊಂಡರೂ, ಕ್ರಮ ಕೈಗೊಳ್ಳಲು ಅಮೆರಿಕ ತಡ ಮಾಡಲಿಲ್ಲ. ಭಯೋತ್ಪಾದನೆ ವಿರುದ್ಧ ಸಮರವನ್ನೇ ಘೋಷಿಸಿತು ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಸಹಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. 2011ರ ದಾಳಿಗೆ 24 ವರ್ಷಗಳು ಪೂರ್ಣಗೊಂಡಿದ್ದು, 25ನೇ ವರ್ಷ ಆರಂಭವಾಗಿದೆ. ಈ ಕಾಲಾವಧಿಯಲ್ಲಿ ಹಲವು ಉಗ್ರ ಸಂಘಟನೆಗಳ ಹೆಡೆಮುರಿ ಕಟ್ಟುವಲ್ಲಿ ಅಮೆರಿಕ ಯಶಸ್ವಿಯಾಗಿದ್ದರೂ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ಬದಲಾಯಿಸುವಲ್ಲಿ ವಿಫಲವಾಗಿದೆ.
ಭಾರತ ಕಳೆದ ಐದಾರು ದಶಕಗಳಿಂದ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದೆ. ಆದರೆ, ಅಂತಾರಾಷ್ಟ್ರೀಯ ವಲಯ ಅದರಲ್ಲೂ ಪಾಶ್ಚಾತ್ಯ ದೇಶಗಳು ಭಯೋತ್ಪಾದನೆಯ ಅಪಾಯದ ಬಗ್ಗೆ ಎಚ್ಚೆತ್ತುಕೊಂಡಿದ್ದು ತುಂಬ ತಡವಾಗಿ. ಅಮೆರಿಕ 9/11ರ ದಾಳಿ ನಡೆಯುವರೆಗೆ ಭಯೋತ್ಪಾದನೆಯ ಬಗ್ಗೆ ಗಂಭೀರವಾಗಿ ಮಾತನಾಡಿರಲಿಲ್ಲ. ಅಮೆರಿಕ ಒಸಾಮ ಬಿನ್ ಲಾಡೆನ್ನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಿತಾದರೂ, ಅದೇ ಪಾಕಿಸ್ತಾನ ಭಯೋತ್ಪಾದನೆಯ ಕಾರ್ಖಾನೆ ಎಂಬುದನ್ನು ಅರಿಯುವಲ್ಲಿ ವಿಫಲವಾಯಿತು. ಈ ರಾಷ್ಟ್ರಗಳು ಪಕ್ಷಪಾತಿ ಧೋರಣೆ ತಳೆಯುತ್ತ ಬಂದಿದ್ದರಿಂದ ಭಯೋತ್ಪಾದನೆಯ ವ್ಯಾಪ್ತಿ ಹೆಚ್ಚಿರುವುದು ಕಹಿಸತ್ಯ. ತಮ್ಮ ಮೇಲೆ ದಾಳಿಯಾದಾಗಲಷ್ಟೇ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯೋತ್ಪಾದನೆ ‘ಜಾಗತಿಕ ಸಮಸ್ಯೆ’ ಎನಿಸುತ್ತದೆ. ಅಮೆರಿಕ ಕೂಡ ತನ್ನ ದೇಶಕ್ಕೆ ಅಪಾಯಕಾರಿ ಎಂದೆನಿಸಿದ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ ಹೊರತು, ಜಾಗತಿಕ ಹಿತವನ್ನು ಪರಿಗಣಿಸುವುದಿಲ್ಲ.
ಅಫ್ಘಾನಿಸ್ತಾನದಲ್ಲಿ ಹಲವು ವರ್ಷಗಳ ಕಾಲ ಅಮೆರಿಕ ಸೇನೆಯ ಉಪಸ್ಥಿತಿ ಇದ್ದರೂ, ಅಲ್ಲಿ ಭಯೋತ್ಪಾದನೆಯನ್ನು ನಿಮೂಲನಗೊಳಿಸಲು ಸಾಧ್ಯವಾಗದೆ ಕೈಚೆಲ್ಲಿತು. ಮಾತ್ರವಲ್ಲ, ತಾನಿಬಾನಿಗಳ ಕೈಗೇ ಅಧಿಕಾರ ಹಸ್ತಾಂತರಿಸಿ ಸೇನೆ ಅಮೆರಿಕಕ್ಕೆ ಮರಳಿದ್ದು ವಿಪರ್ಯಾಸ. ಪಾಕಿಸ್ತಾನದ ಕುರಿತಾಗಿಯೂ ಜಾಣಕುರುಡು ತೋರುತ್ತಿರುವ ಅಮೆರಿಕ ಪಾಕ್ನಲ್ಲಿನ ಉಗ್ರ ನೆಲೆಗಳನ್ನು ನಾಶಗೊಳಿಸಲು ಯಾವುದೇ ರಚನಾತ್ಮಕ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಂಥ ದ್ವಂದ್ವ ನಿಲುವು ಕೈಬಿಡುವವರೆಗೂ, ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ರಕ್ಷಣಾ ತಜ್ಞರು.
ಬೆಚ್ಚಿಬಿದ್ದ ಅಮೆರಿಕ: 2001ರ ಸೆಪ್ಟೆಂಬರ್ 11. ಬೆಳಗ್ಗೆ 8.46ರ ಸಮಯ (ಸ್ಥಳೀಯ ಕಾಲಮಾನ). ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ವಿಶ್ವ ವ್ಯಾಪಾರ ಕೇಂದ್ರಕ್ಕೆ (ವರ್ಲ್ಡ್ ಟ್ರೇಡ್ ಸೆಂಟರ್) ಪ್ರವಾಸಿಗರ ವಿಮಾನ ಬಂದು ಅಪ್ಪಳಿಸಿತು. ಈ ವಿಮಾನದಲ್ಲಿ 10 ಸಾವಿರ ಗ್ಯಾಲನ್ ಅಂದರೆ 37,854 ಲೀಟರ್ ಇಂಧನ ಇತ್ತು. ವಿಮಾನ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ಇಂಧನ ಟ್ಯಾಂಕ್ ಸ್ಪೋಟಿಸಿತು. ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ವಿಮಾನವನ್ನು ಕಟ್ಟಡಕ್ಕೆ ನುಗ್ಗಿಸಿದ ಭಯೋತ್ಪಾದಕ ಮೊಹಮ್ಮದ್ ಅತಾ. ಈತನೇ ಈ ದಾಳಿಯಲ್ಲಿ ಭಾಗಿಯಾದ 19 ಭಯೋತ್ಪಾದಕರಿಗೆ ಲೀಡ್ ಮಾಡಿದ್ದ. ಈ ಎಲ್ಲ ಭಯೋತ್ಪಾದಕರು ಅಲ್ ಕೈದಾ ಸಂಘಟನೆಗೆ ಸೇರಿದವರು. 102 ನಿಮಿಷಗಳ ಕಾಲ ಹೊತ್ತಿ ಉರಿದ ಉತ್ತರ ಭಾಗದ ಗೋಪುರ (ನಾರ್ತ್ ಟವರ್) ಬೆಳಗ್ಗೆ 10.28ಕ್ಕೆ ಕುಸಿದಿತ್ತು. ಇದಾದ ಕೆಲ ಹೊತ್ತಿನಲ್ಲೇ ಪೆಂಟಗಾನ್ ಸೆಂಟರ್ಗೆ ಮತ್ತೊಂದು ಪ್ರಯಾಣಿಕರ ವಿಮಾನವನ್ನು ಉಗ್ರರು ನುಗ್ಗಿಸಿದರು.
ಅಮೆರಿಕ 2003ರ ಮಾರ್ಚ್ನಲ್ಲಿ ಇರಾಕ್ ವಿರುದ್ಧ ಮುಗಿಬಿತ್ತು. ಆಗಿನ ಸದ್ದಾಂ ಹುಸೇನ್ ಸರ್ಕಾರ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಲ್ಲದೆ, ಸಾಮೂಹಿಕ ವಿನಾಶಕಾರಿ ಆಯುಧಗಳನ್ನು ಹೊಂದಿದೆ ಎಂದು ಆರೋಪಿಸಿದ್ದ ಅಮೆರಿಕ ಸದ್ದಾಂ ಹುಸೇನ್ ನೇತೃತ್ವದ ಸರ್ಕಾರದ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಂಡಿತು.
ಆರ್ಥಿಕ ಹೆಜ್ಜೆಗಳು: ಎಕ್ಸಿಕ್ಯೂಟಿವ್ ಆರ್ಡರ್ (2001ರ ಸೆಪ್ಟೆಂಬರ್) ಮೂಲಕ ಭಯೋತ್ಪಾದಕರ ಆಸ್ತಿಗಳನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿತು. 196 ದೇಶಗಳು ಈ ಆರ್ಥಿಕ ಯುದ್ಧವನ್ನು ಬೆಂಬಲಿಸಿದವು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು 3 ಸಾವಿರ ಜನರು. ಇದರಲ್ಲಿ 2,603 ಜನರು ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯಲ್ಲಿ ಮೃತರಾದರು. ಗಾಯಗೊಂಡವರು 6 ಸಾವಿರಕ್ಕೂ ಅಧಿಕ ಜನರು. ಭೀಕರ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾದ ಉಗ್ರರು 19. ಇವರೆಲ್ಲರೂ ಅಲ್ ಕೈದಾ ಸಂಘಟನೆಗೆ ಸೇರಿದವರು.
ಮೊದಲ ಎರಡು ವಿಮಾನಗಳು ನ್ಯೂಯಾರ್ಕ್ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆದವು. ಮೂರನೇ ವಿಮಾನ ಅಮೆರಿಕದ ರಕ್ಷಣಾ ವಿಭಾಗದ ಮುಖ್ಯ ಕಚೇರಿ ಪೆಂಟಗನ್ ಮೇಲೆ ದಾಳಿ ನಡೆಸಿತು. ನಾಲ್ಕನೇ ವಿಮಾನದಲ್ಲಿ ಪ್ರಯಾಣಿಕರು ಭಯೋತ್ಪಾದಕರ ವಿರುದ್ಧ ತಿರುಗಿ ಬಿದ್ದರು. ನಿಯಂತ್ರಣ ಕಳೆದುಕೊಂಡ ಆ ವಿಮಾನ ಪೆನಿಸ್ಲೋವಿಯಾ ಪ್ರದೇಶದಲ್ಲಿ ಪತನಗೊಂಡಿತು.
ಪ್ಯಾಟ್ರಿಯಾಟ್ ಆಕ್ಟ್ 2001ರ ಅಕ್ಟೋಬರ್ 26ರಂದು ಜಾರಿಗೆ ಬಂತು. ಇದು ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳ ಅಧಿಕಾರಗಳನ್ನು ವಿಸ್ತರಿಸಿತು. 2002ರ ನವೆಂಬರ್ನಲ್ಲಿ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಸ್ಥಾಪಿಸಲ್ಪಟ್ಟಿತು. ಇದು ಆಂತರಿಕ ಭದ್ರತೆಯನ್ನು ಹೆಚ್ಚಿಸಲು 20ಕ್ಕೂ ಹೆಚ್ಚು ಏಜೆನ್ಸಿಗಳನ್ನು ಒಗ್ಗೂಡಿಸಿತು.
ಅಲ್-ಕೈದಾ ಸಂಸ್ಥಾಪಕ ಮತ್ತು 9/11 ದಾಳಿಗಳ ಮಾಸ್ಟರ್ವೆುೖಂಡ್ ಒಸಾಮಾ ಬಿನ್ ಲಾಡೆನ್ನನ್ನು ಅಮೆರಿಕದ ನೇವಿ ಸೀಲ್ಸ್ ಪಡೆ ಪಾಕಿಸ್ತಾನದ ಒಬಾಟಾಬಾದ್ನಲ್ಲಿ 2011ರ ಮೇ 2ರಂದು ಹತ್ಯೆ ಮಾಡಿತು. ಈ ಮೂಲಕ ಉಗ್ರರಿಗೆ ಆಶ್ರಯ, ಸಹಕಾರ ನೀಡುತ್ತಿದ್ದ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿ ಬಿತ್ತು. ‘ಆಪರೇಷನ್ ನೆಪ್ಟ್ಯೂನ್ ಸ್ಪಿಯರ್’ ಎಂಬ ಕಾರ್ಯಾಚರಣೆ ಮೂಲಕ ಲಾಡೆನ್ನ ಹತ್ಯೆ ಮಾಡಲಾಯಿತು. ಸಿಎಐ ಗುಪ್ತಚರ ಮೂಲಕ ಬಿನ್ ಲಾಡೆನ್ನ ಕೊರಿಯರ್ ಅನ್ನು ಟ್ರಾ್ಯಕ್ ಮಾಡಿ ಅವನ ಅಡಗುತಾಣವನ್ನು ಪತ್ತೆಹಚ್ಚಿತು. 2011ರ ಮೇ 1ರಂದು ಆಗಿನ ಅಧ್ಯಕ್ಷ ಬರಾಕ್ ಒಬಾಮ ಆದೇಶದ ಮೇರೆಗೆ ಅಮೆರಿಕದ ನೇವಿ ಖಉಅಔ ಟೀಮ್ 6ರ 23 ಸದಸ್ಯರು, ಎರಡು ಹೆಲಿಕಾಪ್ಟರ್ಗಳಲ್ಲಿ ಮೇ 2ರಂದು ದಾಳಿ ನಡೆಸಿ, ಬಿನ್ ಲಾಡೆನ್ ಅನ್ನು ಗುಂಡಿನ ದಾಳಿಯಲ್ಲಿ ಕೊಂದರು. ಲಾಡೆನ್ ಹೆಂಡತಿ ಮತ್ತು ಮಗನೂ ಸೇರಿದಂತೆ ಹಲವರು ಹತರಾದರು. ಲಾಡೆನ್ ಶವವನ್ನು ಗುರುತಿಸಿ ಅದನ್ನು ಸಮುದ್ರದ ಮಧ್ಯದಲ್ಲಿ ಅಮೆರಿಕ ಸೈನಿಕರು ಎಸೆಯುವ ಮೂಲಕ, ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು. ಇದು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪ್ರಮುಖ ಮೈಲಿಗಲ್ಲು.
9/11ರ ದಾಳಿಯ ಬಳಿಕ ಅಮೆರಿಕದ ಭ್ರಮೆ ನುಚ್ಚುನೂರಾಯಿತು ಮತ್ತು ಅಮೆರಿಕ ಮೈಕೊಡವಿಕೊಂಡು ಎದ್ದಿತು. ಭಯೋತ್ಪಾದನೆ ಎಂಥ ಭೀಕರ ಸಂಕಷ್ಟ ಎಂಬುದು ಆಡಳಿತಗಾರರಿಗೆ ಮನದಟ್ಟಾಯಿತು. ಹೀಗಾಗಿ, ಯಾವುದೇ ಕಾರಣಕ್ಕೂ ಮತ್ತೆ 9/11ರಂಥ ಯಾವುದೇ ಭಯೋತ್ಪಾದಕ ದಾಳಿ ನಡೆಯಬಾರದು ಎಂದು ಅಮೆರಿಕ ಸರ್ಕಾರ ಸಂಕಲ್ಪಿಸಿತು. ಮತ್ತು ಆ ಬಳಿಕದ ಅವಧಿಯಲ್ಲಿ ಸರ್ಕಾರಗಳು ಬದಲಾದರೂ, ಭಯೋತ್ಪಾದನೆ ವಿರುದ್ಧದ ನೀತಿಯಲ್ಲಿನ ಕಠಿಣ ನಿಲುವು ಬದಲಾಗಿಲ್ಲ. ಹಾಗಾಗಿಯೇ, 9/11ರ ದಾಳಿಯ ಬಳಿಕ ಕಳೆದ 24 ವರ್ಷಗಳಲ್ಲಿ ಅಮೆರಿಕದಲ್ಲಿ ಒಂದೇಒಂದು ಉಗ್ರದಾಳಿ ನಡೆದಿಲ್ಲ ಎಂಬುದು ಗಮನಾರ್ಹ. ತಾನು ಕೈಗೊಂಡ ಕ್ರಮಕ್ಕೆ ‘ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ’ ಎಂಬ ಹೆಸರನ್ನು ನೀಡಿತು ಅಮೆರಿಕ.
ಅಫ್ಘಾನಿಸ್ತಾನ್ ವಿರುದ್ಧ ಕ್ರಮ: ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಮಿತ್ರರಾಷ್ಟ್ರಗಳು 2001ರ ಅಕ್ಟೋಬರ್ 7ರಂದು ಅಫ್ಘಾನಿಸ್ತಾನ್ ಮೇಲೆ ಆಕ್ರಮಣ ಮಾಡಿದವು. ಅಲ್-ಕೈದಾ ಭಯೋತ್ಪಾದಕ ಸಂಘಟನೆಯ ನೆಲೆಗಳು, ಉಗ್ರ ಶಿಬಿರಗಳು, ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಲಾಯಿತು. ಅಲ್-ಕೈದಾದ ಹಣಕಾಸು ಮೂಲಗಳಿಗೆ ಕತ್ತರಿ ಹಾಕಲಾಯಿತು. ಆದರೆ, ಅಮೆರಿಕ ಅವಳಿಗೋಪುರ ಮೇಲಿನ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್, ಅಲ್ ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಅಡಗಿದ್ದರಿಂದ, ಅಮೆರಿಕ ದಾಳಿಯಿಂದ ತಪ್ಪಿಸಿಕೊಂಡನು.
ಯೆಮನ್, ಸೊಮಾಲಿಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್ನಲ್ಲಿ ಅಮೆರಿಕದಿಂದ ಡ್ರೋನ್ ದಾಳಿಗಳು ಮತ್ತು ವಿಶೇಷ ಕಾರ್ಯಾಚರಣೆಗಳು ನಡೆದವು. ಕುಖ್ಯಾತ ಭಯೋತ್ಪಾದಕ ಸಂಘಟನೆ ಐಎಸ್ಐಸ್ ವಿರುದ್ಧ ಆಕ್ರಮಣಕಾರಿಯಾಗಿ ಹೋರಾಡಿತು.
ಅಂತಾರಾಷ್ಟ್ರೀಯ ಸಹಕಾರ: 9/11 ದಾಳಿಯನ್ನು ಎಲ್ಲ ಸದಸ್ಯರ ಮೇಲಿನ ದಾಳಿ ಯೆಂದು ನ್ಯಾಟೋ ಸಂಘಟನೆ ಪರಿಗಣಿಸಿತು. ಬ್ರಿಟನ್, ಕೆನಡಾ, ಆಸ್ಟ್ರೇ ಲಿಯಾ ಮುಂತಾದ ದೇಶಗಳು ಅಮೆರಿಕಕ್ಕೆ ಮಿಲಿಟರಿ ಬೆಂಬಲ ನೀಡಿದವು.