ಇನ್ಮುಂದೆ ಯುಪಿಐ ಪಾವತಿ ಇನ್ನಷ್ಟು ಸುಲಭ! ಹೇಗೆ ಅಂತೀರಾ? ಈ ಮಾಹಿತಿ ತಿಳಿಯಿರಿ | UPI PIN

ವಿಜಯವಾಣಿ - 2025-07-31T181821.515
Published on

UPI PIN: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಡಿಜಿಟಲ್ ಮಯವೆಂದು ಹೇಳಬಹುದು. ವಿದ್ಯಾಭ್ಯಾಸದಿಂದ ಹಿಡಿದು ದಿನನಿತ್ಯದ ಪದಾರ್ಥಗಳ ಖರೀದಿ ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ಇದೊಂದು ರೀತಿ ಹಲವರ ಸಮಯವನ್ನು ಉಳಿಸಿದರೆ, ಮತ್ತೊಂದು ರೀತಿ ಹಿಂದಿನ ವ್ಯವಸ್ಥೆಗಳನ್ನು ನಶಿಸಿ ಹೋಗುವಂತೆ ಮಾಡುತ್ತಿದೆ. ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಶೀಘ್ರದಲ್ಲೇ ಯುಪಿಐ ಪಾವತಿಗಳನ್ನು ಪಿನ್ ಇಲ್ಲದೆ ಮಾಡುವ ಫೀಚರ್ ಪರಿಚಯ ಕಾರ್ಯಕ್ರಮ.

ರಾಷ್ಟ್ರೀಯ ಪಾವತಿ (NPCI) ಯುಪಿಐ ಪಾವತಿಗಳಿಗೆ ಬಯೋಮೆಟ್ರಿಕ್ ದೃಢೀಕರಣವನ್ನು ತರಲಿದೆ. ಈ ಹೊಸ ದೃಢೀಕರಣ ಪ್ರಕ್ರಿಯೆಯು ಬಳಕೆದಾರರಿಗೆ ಪಿನ್‌ಗಳಿಗೆ ಬದಲಾಗಿ ಫಿಂಗರ್‌ಪ್ರಿಂಟ್ ಅಥವಾ ಮುಖದ ಗುರುತನ್ನು (ಫೇಸ್ ಐಡಿ) ವಹಿವಾಟುಗಳನ್ನು ದೃಢೀಕರಿಸಲಾಗಿದೆ. ಪ್ರಸ್ತುತ ಭಾರತೀಯ ವಸತಿ ಯುಪಿಐ ಪಾವತಿಗಳಿಗೆ ಭಾರಿ ಬೇಡಿಕೆಯಿದೆ.

ಪ್ರಸ್ತುತ, 10 ರೂ. ಟೀ ಕುಡಿಯುವುದರಿಂದ ದುಬಾರಿ ವಸ್ತುಗಳನ್ನು ಖರೀದಿಸುವವರೆಗೆ, ಪ್ರತಿಯೊಬ್ಬರು ಡಿಜಿಟಲ್ ಪಾವತಿಗಳ ಮೇಲೆ ಹೆಚ್ಚು ಅವಲಂಬಿತ ಆಗಿದೆ. ಸ್ಮಾರ್ಟ್ಫೋನ್ ಒಂದನ್ನು ಬಿಟ್ಟು ಪರ್ಸ್, ನೋಟುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವ ಅಭ್ಯಾಸವನ್ನೇ ಕೈಬಿಟ್ಟಿದ್ದಾರೆ. ಆನ್‌ಲೈನ್ ಪಾವತಿಗಳ ವಹಿವಾಟು ಹೆಚ್ಚುತ್ತಿರುವ ಹಿನ್ನಲೆ ಈಗ ಯುಪಿಐ ಇನ್ನಷ್ಟು ಸುಲಭ. ಯುಪಿಐ ಪಿನ್ ಅನ್ನು ಒದಗಿಸದೆಯೇ ಪಾವತಿಗಳನ್ನು ಮಾಡಬಹುದು.

ಪಿನ್ ಬದಲಿಗೆ ಫಿಂಗರ್‌ಪ್ರಿಂಟ್, ಫೇಸ್ ಐಡಿ

ವರದಿಗಳ ಪ್ರಕಾರ, ಯುಪಿಐ ಪಿನ್ ಬದಲಿಗೆ ಫಿಂಗರ್ ಪ್ರಿಂಟ್ ಅಥವಾ ಮುಖದ ಗುರುತಿನಂತಹ ಬಯೋಮೆಟ್ರಿಕ್ ವಿಧಾನಗಳನ್ನು ಪಾವತಿಗಳನ್ನು ದೃಢೀಕರಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಹೊಸ ವ್ಯವಸ್ಥೆಗಳು ಜಾರಿಗೆ ತರಲು ಮುಂದಾಗಿದೆ. ಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್ ಆ್ಯಪ್ ಸೇರಿದಂತೆ ಒಂದಷ್ಟು ಅಪ್ಲಿಕೇಶನ್‌ಗಳಲ್ಲಿ ಈ ಹೊಸ ಫೀಚರ್​ ಜಾರಿಯಾಗಲಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಪಾವತಿಗಳಲ್ಲಿ ಬಳಕೆದಾರರ ಆಯ್ಕೆ

ಬಯೋಮೆಟ್ರಿಕ್​ ವೈಶಿಷ್ಟ್ಯವನ್ನು ಬಳಸಲೇಬೇಕು ಎಂಬುದು ಕಡ್ಡಾಯವಲ್ಲ. ಯುಪಿಐ ಬಳಕೆದಾರರು ಪಿನ್‌ ಅಥವಾ ಮುಖ/ಬೆರಳಚ್ಚು ಅನ್‌ಲಾಕ್ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ. ಅಸಲಿಗೆ NPCI ಈ ಹೊಸ ನೀತಿಯನ್ನು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಯುಪಿಐ ಪಿನ್‌ಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ ಎನ್ನುವವರಿಗೆ ಫೇಸ್​ ಐಡಿ ಅಥವಾ ಫಿಂಗರ್​ ಪ್ರಿಂಟ್​ ಪ್ರಯೋಜನಕಾರಿಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net