

ರಾಂಪುರ: ಉತ್ತರಪ್ರದೇಶದ ರಾಂಪುರ ನಗರದ ಬಾಲಕಿಯೊಬ್ಬಳು ಕಲೆಕ್ಟರೇಟ್ನಲ್ಲಿರುವ ಎಸ್ಪಿ ಕಚೇರಿಯ ಹೊರಗೆ ದಾಂಧಲೆ ಮಾಡಿದ್ದು, ಆಕೆಯ ವಿಡಿಯೋ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತ ಗೌರವ್ ಕುಶ್ವಾಹ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಗುಂಪಿನ ನಡುವೆ "ನಾನು ಮುಸ್ಲಿಂ ಧರ್ಮವನ್ನು ದ್ವೇಷಿಸುತ್ತೇನೆ, ನಾನು ಮುಸ್ಲಿಂ ಧರ್ಮವನ್ನು ತೊರೆಯಲು ಬಯಸುತ್ತೇನೆ ಯೋಗಿ ಆದಿತ್ಯನಾಥ್ ಸರ್, ನನಗೆ ಸಹಾಯ ಮಾಡಿ" ಎಂದು ಬಾಲಕಿ ಕೂಗುತ್ತಿರುವುದು ಕಂಡುಬರುತ್ತದೆ. ಆದರೆ ಘಟನೆಯ ನಿಖರವಾದ ಸಮಯ ತಿಳಿದಿಲ್ಲ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬಾಲಕಿ ತನ್ನ ಸಂಬಂಧಿಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾಳೆ. ಸಂಬಂಧಿಕರು ಕೂಡ ತನ್ನನ್ನು ಶೋಷಿಸಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಬಾಲಕಿ ಗದ್ದಲ ಶುರು ಮಾಡಿದ ನಂತರ ಪೊಲೀಸರು ಆಕೆಯನ್ನು ಹಿಡಿದು ಕರೆದೊಯ್ದರು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಬಾಲಕಿಯ ದುಃಖದ ಹಿಂದಿನ ಸತ್ಯ ಮತ್ತು ಆಕೆಯ ಆರೋಪಗಳ ಸಿಂಧುತ್ವವನ್ನು ಖಚಿತಪಡಿಸಿಕೊಳ್ಳಲು ಬರ್ಹಾಲ್ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.