ಸರ್ಕಸ್​ ಕಲಾವಿದನ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆಹಚ್ಚಲು ಪೊಲೀಸರಿಗೆ ನೆರವಾದ ಕಾಂಡೋಮ್​ ಪ್ಯಾಕೆಟ್!

Condom Accused Arrest
Published on

ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಭಯಾನಕ ಘಟನೆಯಲ್ಲಿ ಸರ್ಕಸ್​ ಕಲಾವಿದ ಅಜಾಬ್​ ಸಿಂಗ್​ ಎಂಬುವರ ಬರ್ಬರ ಹತ್ಯೆಯಾಗಿ‘ತ್ತು. ಈ ಪ್ರಕರಣದ ಇತ್ತೀಚಿನ ಅಪ್​ಡೇಟ್​ ಹೊರಬಿದ್ದಿದ್ದು, ಕೊಲೆ ನಡೆದ ಸ್ಥಳದಲ್ಲಿ ಪತ್ತೆಯಾದ ಕಾಂಡೋಮ್​ ಪ್ಯಾಕೆಟ್​ ಪೊಲೀಸರ ತನಿಖೆಗೆ ನೆರವು ನೀಡಿದ್ದು, ಕೊಲೆ ನಿಗೂಢವನ್ನು ಭೇದಿಸಲು ಮಹತ್ವದ ಸುಳಿವು ನೀಡಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮೂವರು ಆರೋಪಿಗಳ ಬಂಧನ

ಜೂನ್​ 11ರಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುಟ್ಟ ಸ್ಥಿತಿಯಲ್ಲಿ ಕಲಾವಿದ ಅಜಾಬ್​ ಸಿಂಗ್​ ದೇಹ ಪತ್ತೆಯಾಯಿತು. ಈ ವೇಳೆ ಪೊಲೀಸರಿಗೆ ಆ ಪ್ರದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಕಾಂಡೋಮ್​ ಬ್ರ್ಯಾಂಡ್​ ಟೈಮೆಕ್ಸ್ ಕಾಂಡೋಮ್​ ಪ್ಯಾಕೆಟ್ ಸಿಕ್ಕಿತು. ತನಿಖಾಧಿಕಾರಿಗಳ ಪ್ರಕಾರ ಆರೋಪಿಗಳಾದ ಇಮ್ರಾನ್​, ಫರ್ಮಾನ್​ ಮತ್ತು ಇರ್ಫಾನ್ ಭಿತ್ರಿ ದೀಹ್​ ಗ್ರಾಮದಲ್ಲಿ ಸರ್ಕಸ್​ ಅಳವಡಿಸಲು ಶಹರಾನ್​ಪುರದಿಂದ ಬಂದಿದ್ದರು. ಅಂದು ರಾತ್ರಿ ಆರತಿ ಎಂಬ ಮಹಿಳೆಯೊಂದಿಗೆ ಮೂವರು ಉಳಿದುಕೊಂಡಿದ್ದರು. ಅದಕ್ಕಾಗಿ ಕಾಂಡೋಮ್​ ಖರೀದಿ ಮಾಡಿದ್ದರು.

ಸಹೋದರಿ ಜತೆ ಅನೈತಿಕ ಸಂಬಂಧ

ಕೊಲೆಯಾದ ಸಿಂಗ್​ ಓರ್ವ ಮ್ಯಾಜಿಕ್​ ಕಲಾವಿದ. ಈತ ಅರೋಪಿಗಳಾದ ಇಮ್ರಾನ್​ ಮತ್ತು ಇರ್ಫಾನ್​ ಸಹೋದರಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಇದು ಇರ್ಫಾನ್​ ಮತ್ತು ಇಮ್ರಾನ್​ ಕೋಪಕ್ಕೆ ಕಾರಣವಾಗಿತ್ತು. ಅದೇ ದಿನ ಇಬ್ಬರು ಸಹೋದರು ಫರ್ಮಾನ್​ ಜತೆ ಸೇರಿ ಕಂಠಪೂರ್ತಿ ಕುಡಿದಿದ್ದರು. ಬಳಿಕ ಕುಡಿದ ಮತ್ತಿನಲ್ಲಿ ಸಿಂಗ್​ ಜತೆಗೆ ಗಲಾಟೆ ಆರಂಭಿಸಿದ್ದರು. ಕೊಲೆ ಮಾಡಲು ಇರ್ಫಾನ್​ಗೆ ಇಷ್ಟವಿರಲಿಲ್ಲ. ಬೆದರಿಕೆ ಹಾಕುವುದು ಆತನ ಉದ್ದೇಶವಾಗಿತ್ತು. ಆದರೆ, ಇಮ್ರಾನ್​ ತನ್ನ ಕೋಪವನ್ನು ನಿಯಂತ್ರಿಸಲಾಗದೇ ಆತನನ್ನು ಕೊಲೆ ಮಾಡಿದನು.

ಕೊಲೆ ಮಾಡಿದ ಬಳಿಕ ಮೂವರು ಸೇರಿ ಅಜಾಬ್​ ಸಿಂಗ್​ ಮೃತದೇಹವನ್ನು ಸುಟ್ಟು ಹಾಕಿ ಪರಾರಿಯಾಗಿದ್ದರು. ಅದೇ ಜಾಗದಲ್ಲಿ ಕಾಂಡೋಮ್​ ಪತ್ತೆಯಾಗಿತ್ತು. ಅದರ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net