ನಿಧಿಗಾಗಿ ಪುಟ್ಟ ಮಗಳನ್ನೇ ಹೀನಾಯವಾಗಿ ಬಲಿಕೊಟ್ಟ ಬುದ್ಧಿಗೇಡಿ ಅಪ್ಪ

Murder 6
Published on

ನಿಧಿಗಾಗಿ 10 ವರ್ಷದ ಮಗಳನ್ನು ಬಲಿಕೊಟ್ಟ ಕ್ರೂರ ತಂದೆ ಈತ. ಮಾಂತ್ರಿಕನೋರ್ವನ ಮಾತನ್ನು ನಂಬಿ ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಉತ್ತರ ಪ್ರದೇಶದ ಲಖನೌ ಬಳಿಯ ಬಾರ್ಬಂಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಬಾಲಕಿಯ ತಂದೆಯ ಬಳಿ ಮಾಂತ್ರಿಕನೋರ್ವ ನಿಮ್ಮ ಮನೆಯ ಹಿಂದೆ ನಿಧಿಯನ್ನು ಹುಗಿದಿಡಲಾಗಿದೆ. ಅದನ್ನು ತೆಗೆಯಬೇಕಾದರೆ ನಿಮ್ಮ ಮಗಳನ್ನು ಬಳಿ ಕೊಡಲೇಬೇಕು ಎಂದು ಹೇಳಿದ್ದ. ಇದನ್ನೂ ಓದಿ: ಚಾಪೆ ಮೇಲೆ ಕುಳಿತು ಬಾಳೆಲೆಯಲ್ಲಿ ಬಂಗಾಳಿ ಖಾದ್ಯ ಸವಿದ ಅಮಿತ್​ ಷಾ; ಸಿಹಿ ಮುಟ್ಟಲಿಲ್ಲ!

ಮಾಟಗಾರನ ಮಾತನ್ನು ನಂಬಿದ್ದ ಆರೋಪಿ ಆಲಂ ಮಗಳನ್ನು ಆತನ ಬಳಿ ಕರೆದುಕೊಂಡು ಹೋಗಿದ್ದ. ಪೂಜೆ ಮಾಡುವ ನೆಪದಲ್ಲಿ ಆ ಬಾಲಕಿಗೆ ಮಾಂತ್ರಿಕ, ಆಕೆಯ ಅಪ್ಪ ಮತ್ತು ಇನ್ನೊಬ್ಬಾತ ಸೇರಿ ಸಿಕ್ಕಾಪಟೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಕೆ ಮೃತಪಟ್ಟಿದ್ದಾಳೆ. ಮಗಳನ್ನು ರಕ್ಷಿಸಲು ಬಂದ ಪತ್ನಿಗೂ ಆತ ಮನಬಂದಂತೆ ಥಳಿಸಿದ್ದಾನೆ. ಸತ್ತ ಮಗಳನ್ನು ಮಾಂತ್ರಿಕನ ಸೂಚನೆಯಂತೆ ಮನೆಯೊಳಗೆ ಹೂತಿದ್ದಾನೆ.

ಮೃತ ಬಾಲಕಿಯ ತಾಯಿಯ ಅಮ್ಮನಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೂವರನ್ನೂ ಬಂಧಿಸಿದ್ದಾರೆ.

ಬಾಲಕಿಯ ಶವವನ್ನು ಹೊರತೆಗೆದು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net